ಆಸ್ಪತ್ರೆಗೆ ದಾಖಲು















ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ಮಗನಿಗೆ ತಾಯಿ ಕತ್ತಿಯಿಂದ ಕಡಿದ ಪರಿಣಾಮ ಮಗ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಎ.26ರಂದು ರಾತ್ರಿ ಈ ಘಟನೆ ನಡೆದಿದೆ. ಅಮಲು ಸೇವಿಸಿ ರಾತ್ರಿ ಮನೆಯಲ್ಲಿ ಮಗ ರಾಮಚಂದ್ರ ಹಾಗೂ ತಾಯಿ ಯಶೋದಾರ ಮಧ್ಯೆ ಚಕಮಕಿ ನಡೆದಿದೆ. ಈ ವೇಳೆ ತಾಯಿ ಕತ್ತಿಯಿಂದ ಕಡಿದರೆನ್ನಲಾಗಿದೆ. ಗಾಯಗೊಂಡ ರಾಮಚಂದ್ರ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






