














ಇತ್ತೀಚೆಗೆ ನಿಧನರಾದ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ವಸಂತ ಗುಡ್ಡೆಮನೆಯವರ ಶ್ರದ್ದಾಂಜಲಿ ಸಭೆಯು ಮೇ. ೩ರಂದು ಮೃತರ ಮನೆಯಲ್ಲಿ ನಡೆಯಿತು. ದಿನೇಶ್ ಮಡಪ್ಪಾಡಿ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ನಿವೃತ್ತ ಶಿಕ್ಷಕಿ ರಾಮಕ್ಕ, ತಂದೆ ವೀರಪ್ಪ ಗೌಡ, ತಾಯಿ ರಾಮಕ್ಕ, ಸಹೋದರ ಸೀತಾರಾಮ, ಆನಂದ, ಮಾಧವ, ಚಂದ್ರಶೇಖರ, ಸಹೋದರಿಯರಾದ ಮೋಹಿನಿ, ಸೇಸಮ್ಮ, ನಳಿನಾಕ್ಷಿ, ಮನೆಯವರು, ಕುಟುಂಬಸ್ಥರು, ಬಂಧುಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.







