ಮೊಗರ್ಪಣೆ: ಮಾಸಿಕ ಜಲಾಲಿಯ ರಾತೀಬ್ ಹಾಗೂ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಸುಳ್ಯ :ಮೊಗರ್ಪಣೆ ಜುಮಾ ಮಸೀದಿಯಲ್ಲಿ ಮಾಸಿಕ ಜಲಾಲಿಯ ರಾತೀಬ್ ಹಾಗೂ ಸುಳ್ಯ ಪರಿಸರದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮೇ 3ರಂದು ಮೊಗರ್ಪಣೆ ಮಸೀದಿಯಲ್ಲಿ ನಡೆಯಿತು.

ಮಸೀದಿಯ ಮುದರ್ರಿಸ್ ಅಬ್ದುಲ್ ಖಾದರ್ ಸಫಾಫಿ ಆಲ್ ಕಾಮಿಲ್ ಮುದುಗಡ ಇವರು ದುವಾ ಮಜ್ಲೀಸ್ ನ ನೇತೃತ್ವವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ಹೊರಟಿರುವ ಸುಳ್ಯದ ಹಜ್ಜಾಜ್ ಗಳಿಗೆ ಶಾಲು ಹೊಧಿಸಿ ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು.
ಮಸೀದಿಯಲ್ಲಿ ಈ ಮೊದಲು ಸಹಾಯಕ ಖತೀಬರಾಗಿ ಕಾರ್ಯ ನಿರ್ವಹಿಸಿದ್ದ ಫಾಹಿಝ್ ಜೊಹರಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಕಮಿಟಿ ಅಧ್ಯಕ್ಷ ಸಿಎಂ ಉಸ್ಮಾನ್, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಮುಅಲ್ಲಿಮ್ ವೃಂದದವರು ಹಾಗೂ ಊರಿನ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಿತು.