













ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ನಿರ್ದೇಶಕರಾಗಿ ಸುನಿಲ್ ರೈ ಪೆರುವಾಜೆ, ಪಿ.ಬಿ.ಸುಧಾಕರ ರೈ ಪೆರಾಜೆ, ಪ್ರಮೋದ್ ಕುಮಾರ್ ರೈ ವೈಪಾಲ ಹಾಗೂ ಶ್ರೀಮತಿ ವೇದಾ ಹರೀಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪೆರುವಾಜೆ ಸುನಿಲ್ ರೈಯವರು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈಗ ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರು ಮೂರು ಅವಧಿಗಳಿಂದ ಮಾತೃಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿ.ಬಿ.ಸುಧಾಕರ ರೈಯವರು ಈ ಹಿಂದೆ ಸುಳ್ಯ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾಗಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು , ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ಪಿ.ಬಿ.ದಿವಾಕರ ರೈಯವರು ಮಾತೃಸಂಘದ ನಿರ್ದೇಶಕರಾಗಿದ್ದರು. ಈ ಬಾರಿ ಅಣ್ಣನ ಬದಲು ತಮ್ಮನನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಪ್ರಮೋದ್ ಕುಮಾರ್ ರೈ ಯವರು ಬೆಳ್ಳಾರೆಯ ಕಲಾ ಮಂದಿರ ನೃತ್ಯ ತರಬೇತಿ ಸಂಸ್ಥೆಯ ನಿರ್ದೇಶಕರಾಗಿದ್ದು, ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದಾರೆ. ಎರಡನೇ ಬಾರಿಗೆ ಮಾತೃಸಂಘದ ನಿರ್ದೇಶಕರಾಗಿದ್ದಾರೆ.
ಶ್ರೀಮತಿ ವೇದಾ ಹರೀಶ್ ಶೆಟ್ಟಿಯವರು ಜಾಲ್ಸೂರು ಗ್ರಾಮದ ಬೊಳುಬೈಲಿನವರಾಗಿದ್ದು, ಸಂಜೀವಿನಿ ಒಕ್ಕೂಟದಲ್ಲಿ ಮತ್ತು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಥಮ ಬಾರಿಗೆ ಮಾತೃಸಂಘಕ್ಕೆ ನಿರ್ದೇಶಕರಾಗುತ್ತಿದ್ದಾರೆ.







