













ಸುಳ್ಯದ ಜೆ.ಸಿ. ರಸ್ತೆಯಲ್ಲಿರುವ ಪದ್ಮಶ್ರೀ ಕಾಂಪ್ಲೆಕ್ಸ್ನಲ್ಲಿ ಶ್ರೀಮತಿ ಶಾಂತಿ ಮೋಹನಪ್ಪರವರ ಮಾಲಕತ್ವದ ‘ವಿಸ್ಮಯ’ ಎಂ ಎಸ್ ಲೇಡೀಸ್ ಟೈಲರ್ ಮೇ. ೪ರಂದು ಶುಭಾರಂಭಗೊಂಡಿತು.
ಸಂಸ್ಥೆಯ ಉದ್ಘಾಟನೆಯನ್ನು ಕೆವಿಜಿ ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಯಶೋದಾ ರಾಮಚಂದ್ರ ನೆರವೇರಿಸಿದರು.

ಈ ಸಂದರ್ಭದಲ್ಲಿ ಅರಿ ವರ್ಕ್ಸ್ ಕಲಾ ಪ್ರಶಸ್ತಿ ಮತ್ತು ನೋಬೆಲ್ ವಿಶ್ವ ದಾಖಲೆ ಹಾಗೂ ಆಸ್ಕರ್ ಬುಕ್ ರೆಕಾರ್ಡ್ ಮಾಡಿರುವ ಶ್ರೀಮತಿ ಸೌಭಾಗ್ಯ ರಾಜೇಶ್ ಬೆಳ್ತಂಗಡಿ, ನ.ಪಂ. ಮಾಜಿ ಸದಸ್ಯೆ ಶ್ರೀಮತಿ ಶಿಲ್ಪಾ ಸುದೇವ್, ಸುಳ್ಯ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ, ಸುಳ್ಯ ರೆಪ್ಕೋ ಬ್ಯಾಂಕ್ ಸದಸ್ಯ ಪೆರುಮಾಳ್, ಸುಳ್ಯ ರೀಕೋ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಎಸ್., ಆಡಿಟರ್ ಮತ್ತು ಟ್ಯಾಕ್ಸ್ ಕನ್ಸಲ್ಟೆಂಟ್ ಶ್ರೀಪತಿ ಭಟ್, ಶ್ರೀಮತಿ ಜಯಂತಿ ಹರಿಶ್ಚಂದ್ರ ಕಾಯರ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಯಮಿ ಎಂ.ಬಿ.ಸದಾಶಿವ, ಕಟ್ಟಡ ಮ್ಹಾಾಲಕರಾದ ದೇವಿಪ್ರಸಾದ್ ಅತ್ಯಾಾಡಿ ಮತ್ತಿಿತರರು ಕಾರ್ಯಕ್ರಮಕ್ಕೆೆ ಆಗಮಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಸಂಸ್ಥೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಇಲ್ಲಿ ಕಂಪ್ಯೂಟರೈಸ್ಡ್ ಎಂಬ್ರಾಯ್ಡಡರಿ, ವೆಡ್ಡಿಂಗ್ ಬ್ಲೌಸ್ ಡಿಸೈನಿಂಗ್, ಆರಿ ವರ್ಕ್, ಸಾರಿ ಕುಚ್ಚು ಹಾಗೂ ಎಲ್ಲಾ ತರದ ಹೊಲಿಗೆ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮ್ಹಾಲಕಿ ಶ್ರೀಮತಿ ಶಾಂತಿ ಮೋಹನಪ್ಪ ತಿಳಿಸಿದ್ದಾರೆ.








