













ಜಿಲ್ಲೆ ಹಿರಿಯ ಸಹಕಾರಿ ಧುರೀಣ ಸುಳ್ಯದ ಪಿ.ಬಿ.ದಿವಾಕರ ರೈಯವರ ಧರ್ಮಪತ್ನಿ ಶ್ರೀಮತಿ ವಿದ್ಯಾ ದಿವಾಕರ ರೈ ಯವರು ಅಸೌಖ್ಯದ ಕಾರಣದಿಂದ ಇಂದು ಸಂಜೆ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.ವಿದ್ಯಾರವರು ಹಲವು ಸಮಯದಿಂದ ಅಸೌಖ್ಯದ ಕಾರಣದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಮತ್ತು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆ ಕಾರಣಕ್ಕಾಗಿ ದಿವಾಕರ ರೈಯವರು ಕೂಡ ಮಂಗಳೂರಿನಲ್ಲೇ ಇದ್ದು ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಇಂದು ಸಂಜೆ 6 ಗಂಟೆ ಸುಮಾರಿಗೆ ಎ.ಜೆ. ಆಸ್ಪತ್ರೆಯಲ್ಲಿ ವಿದ್ಯಾರವರು ನಿಧನರಾದರು.ಅವರ ಅಂತ್ಯಸಂಸ್ಕಾರವನ್ನು ನಾಳೆ ಬೆಳಿಗ್ಗೆ ಮಂಗಳೂರಿನಲ್ಲೆ ನಡೆಸಲಾಗುವುದೆಂದು ಮನೆಯವರು ತಿಳಿಸಿದ್ದಾರೆ.ಮೃತರು ಪತಿ ಮತ್ತು ಪುತ್ರಿಯನ್ನು , ಬಂಧುಗಳನ್ನು ಅಗಲಿದ್ದಾರೆ.







