ಎಡಮಂಗಲ ಮುತ್ತಪ್ಪ ನಗರದಲ್ಲಿ ಮುತ್ತಪ್ಪ ತಿರುವಪ್ಪ ದೈವಸ್ಥಾನ ಹಾಗೂ ಪರಿವಾರ ದೈವಗಳಾದ ಭೈರವ, ಗುಳಿಗ, ವೀರಭದ್ರ ಮತ್ತು ಕರಿಂಕಾಳಿ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮೇ 8 ರಿಂದ 10ರವರೆಗೆ ವೇದಮೂರ್ತಿ ಮನೋಹರ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಿತು.


ಮೇ.08 ರಂದು ಸಂಜೆ ಶ್ರೀ ಕ್ಷೇತ್ರಕ್ಕೆ ತಂತ್ರಿಗಳ ಆಗಮನ, ಗಣಪತಿ ಪ್ರಾರ್ಥನೆ, ನವಾಕ ಪ್ರಧಾನ ಹೋಮ, ಕಲಾ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರತಿಷ್ಟಾಕಲಶ ಹಾಗೂ ಅಭಿಷೇಕ, ದೈವಗಳ ಪ್ರತಿಷ್ಠೆ ಹಾಗೂ ಅನ್ನಸಂತರ್ಪಣೆ ನಡೆಯಿತು.















ಮೇ.09ರಂದು ಸಂಜೆ ಶ್ರೀ ಮುತ್ತಪ್ಪ ದೈವದ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.
ಮೇ.10 ರಂದು ಶ್ರೀ ತಿರುವಪ್ಪ ದೈವದ ನೇಮ, ಶ್ರೀ ಮುತ್ತಪ್ಪ ದೈವದ ವೆಳ್ಳಾಟಂ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.

ಗೌರವ
ನಿಂತಿಕಲ್ಲು ವಲಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರು ನಿರಂತರ ಶ್ರಮದಾನ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಜೀರ್ಣೋದ್ದಾರ ಸಂದರ್ಭದಲ್ಲಿ ಆರ್ಥಿಕವಾಗಿ, ವಸ್ತುರೂಪವಾಗಿ ಸಹಕರಿಸಿದ ಎಲ್ಲರನ್ನು ಗುರುತಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಲಾಯಿತು. ಬಂದ ಭಕ್ತರನ್ನು ಪ್ರಸಾದ ನೀಡಿ ಹರಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆ ಹೇಮಳ, ಗೌರವ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಕಾರ್ಯದರ್ಶಿ ಕರುಣಾಕರ ಗೌಡ ಎರ್ಕ, ಶ್ರೀಹರಿ ಭಟ್ ನೂಚಿಲ, ವಿಶ್ವನಾಥ ಗೌಡ ಕಲೆಂಬಿ, ಚಂದ್ರಶೇಖರ ಮರಕ್ಕಡ, ಎಲ್ಯಣ್ಣ ಗೌಡ ಜಾಲ್ತಾರು, ಗಿರೀಶ್ ನಡುಬೈಲು, ಶೇಖರ ಎರ್ಕ, ರಾಮಣ್ಣ ಗೌಡ ಜಾಲ್ತಾರು, ಶಿವಪ್ರಸಾದ್ ಹೊನ್ನಪ್ಪಾಡಿ, ನಾರಾಯಣ ಗೌಡ ಕೊಡಂಗೆ, ಕರುಣಾಕರ ಗೌಡ ಎರ್ಕ, ಭರತ್ ಬಳಕ್ಕಬೆ, ಅಜಿತ್ ರೈ ಮಾಲೆಂಗಿರಿ, ಬಾಲಕೃಷ್ಣ ಗೌಡ ಹೊನ್ನಪ್ಪಾಡಿ, ರಾಮಚಂದ್ರ ನಾಯ್ಕ ಶಾಂತಿಯಡ್ಕ, ಶಶಿಧರ ಶಾಂತಿಯಡ್ಕ, ಶಶಿoದ್ರ ಕೊಯಿಲ, ಶ್ರೀಮತಿ ಭವ್ಯ ಮಾಲೆಂಗಿರಿ, ಗಿರಿಯಪ್ಪ ಮಾಲೆಂಗಿರಿ, ಊರ ಪರ ಊರ ಭಕ್ತರು ಉಪಸ್ಥಿತರಿದ್ದರು.
ವರದಿ : ಎ ಎಸ್ ಎಸ್







