ನಿಂತಿಕಲ್ಲು : ಶ್ರೀ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವಾರ್ಷಿಕ ಸಭೆ

0

ಅಧ್ಯಕ್ಷರಾಗಿ ವಿಶ್ವನಾಥ ಗೌಡ ಕಲ್ಲೆoಬಿ ಪುನರಾಯ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು, ನಿಂತಿಕಲ್ಲು ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಾರ್ಷಿಕ ಸಭೆಯು ಎಣ್ಮುರಿನ ಸೀತಾರಾಮoಜನೇಯ ಭಾರತಿ ಭಜನಾ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ವರ್ಷದ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮ ನಡೆಯಿತು.

ನಿಂತಿಕಲ್ಲು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ವಿಶ್ವನಾಥ ಗೌಡ ಕಲ್ಲೇoಬಿಯವರು ಪುನರಾಯ್ಕೆಗೊಂಡರು.

ಸಭೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು ಮಾತನಾಡಿ, ” ಇನ್ನಷ್ಟು ಜನಜಾಗೃತಿ ಪದಾಧಿಕಾರಿಗಳ ಆಯ್ಕೆ ಮಾಡಿಕೊಂಡು, ವಲಯದ ಟೀಮನ್ನು ಇನ್ನಷ್ಟು ಭದ್ರಗೊಳಿಸಬೇಕು, ಎಲ್ಲರ ಸಹಕಾರಬೇಕೆಂದು ಶುಭ ಹಾರೈಸಿದರು. ಸಭೆಯಲ್ಲಿ ವಲಯದ ಕೋ ಆಫ್ ಸದಸ್ಯರುಗಳಾದ ಬಾಲಕೃಷ್ಣ ಮಾಸ್ಟರ್ ಹೇಮಳ, ಬಾಲಕೃಷ್ಣ ಮಾಸ್ಟರ್ ಮರ್ದೂರು, ವಸಂತ ಗೌಡ ನಡುಬೈಲು, ಆನಂದ ಅರೇಂಬಿ, ದಾಮೋದರ ಗೌಡ ಎಡಮಂಗಲ, ರೂಪರಾಜ್ ರೈ, ಉಮೇಶ್ ಶೆಟ್ಟಿ ಮರುವಂಜ, ಉಪಸ್ಥಿತರಿದ್ದು ಸೂಕ್ತ ಮಾಹಿತಿ ಮಾರ್ಗದರ್ಶನ ನೀಡಿದರು. ವಲಯದ ಮೇಲ್ವಿಚಾರಕ ಶ್ರೀಮತಿ ಸವಿತಾ ಶೆಟ್ಟಿ ಸ್ವಾಗತಿಸಿ, ಸೇವಾ ಪ್ರತಿನಿಧಿ ರಾಮಣ್ಣಗೌಡ ವಂದಿಸಿದರು.

ವರದಿ : ಎ ಎಸ್ ಎಸ್