














ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘ ಇದರ ವತಿಯಿಂದ ಪ್ರಥಮ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಮೇ.10ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಘದ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಸದಸ್ಯರಾದ ಕರ್ನಲ್ ಯನ್. ಶರತ್ ಭಂಡಾರಿ , ದೇರಣ್ಣ ಗೌಡ ಅಡ್ಡಂತಡ್ಕ , ಕೆ. ವೀರಪ್ಪ ಗೌಡ ಮಡ್ತಿಲ, ಚೆನ್ನಪ್ಪ ಗೌಡ ಅತ್ಯಾಡಿ ಇವರನ್ನು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕು.ವೈಶಾಲಿ ಯು.ಎಂ., ಕು. ಶಿಬಾನಿ ಯಂ ಜೆ., ಕು. ದಿಶಾ ಬಿ.ಕೆ., ಕು ಸಾನ್ವಿ ಎಸ್, ಕಾರ್ತಿಕ್ ಪ್ರಸಾದ್ ಯು.ಪಿ., ಸುಶಾಂತ್ ಪಿ ಎಸ್ ರವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ಗೌರವ ಕ್ಯಾಪ್ಟನ್ ಜಯಕರ ಮಡ್ತಿಲ ಅಧ್ಯಕ್ಷತೆಯಲ್ಲಿ ಸಭೆನಡೆಯಿತು. ಗೌರವ ಸಲಹೆಗಾರರಾದ ಕರ್ನಲ್ ಯನ್ ಶರತ್ ಭಂಡಾರಿ, ಗೌರವಾಧ್ಯಕ್ಷರಾದ ದೇರಣ್ಣಗೌಡ ಅಡ್ಡಂತಡ್ಕ, ಸಂಘದ ಕಾರ್ಯದರ್ಶಿ ಗುರುಪ್ರಸಾದ್ ರೈ ಪೇರಾಲುಗುತ್ತು, ಖಜಾಂಚಿ ರಘುಪತಿ ಉಗ್ರಾಣಿ ಮನೆ, ಕಾರ್ಯಕ್ರಮದ ಸಂಚಾಲಕರಾದ ಕಿರಣ್ ಕುಮಾರ್ ಮುಡೂರು ಹಾಗೂ ಶರತ್ ಕುಮಾರ್ ನಾರ್ಕೋಡು ಮತ್ತು ಸಂಘದ ಸದಸ್ಯರು ಮತ್ತು ಮಾಜಿ ಸೈನಿಕರ ಕುಟುಂಬಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮನೋರಂಜನೆ ಕಾರ್ಯಕ್ರಮ ದ ಜತೆಗೆ ಸಹಭೋಜನ ನಡೆಯಿತು. ಕಾರ್ಯಕ್ರಮವನ್ನು ಶಿಕ್ಷಕರು ಮತ್ತು ಮಾಜಿ ಸೈನಿಕರಾದ ಭವಾನಿ ಶಂಕರ ಕೆ. ಮತ್ತು ಶಿಕ್ಷಕಿ ಸುರೇಖಾ ರೈ ಅವರು ನಿರೂಪಿಸಿದರು.







