ಕುಕ್ಕೆಯಲ್ಲಿ ಭಕ್ತರ, ವಾಹನ ದಟ್ಟಣೆ

0

ಶಾಲಾ ಕಾಲೇಜುಗಳಿಗೆ ಬೇಸಿಗೆ ರಜಾ ಹಿನ್ನೆಲೆಯಲ್ಲಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಹನ ದಟ್ಟನೆಯೊಂದಿಗೆ ಭಕ್ತ ಸಮೂಹವೇ ಕ್ಷೇತ್ರಕ್ಕೆ ಆಗಮಿಸಿತ್ತು. ರಾಜ್ಯದ ವಿವಿಧ ಮೂಲಗಳಿಂದ ಆಗಮಿಸಿದ ಭಕ್ತಾದಿಗಳನ್ನು ಹೊತ್ತ ವಾಹನಗಳು ಕಾಶಿ ಕಟ್ಟೆಯಿಂದಲೇ ನಿಧಾನವಾಗಿ ಚಲಿಸಿ ಕುಕ್ಕೆ ರಥಬೀದಿಯ ಸರ್ಕಲ್ ನಿಂದ ಅಲ್ಲಲ್ಲಿ ಪಾರ್ಕಿಂಗ್ ಪ್ರದೇಶಗಳಿಗೆ ತೆರಳಿದವು. ಕ್ಷೇತ್ರದಲ್ಲಿರುವ ಎಲ್ಲಾ ಪಾರ್ಕಿಂಗ್ ಪ್ರದೇಶಗಳು ವಾಹನಗಳಿಂದ ಭರ್ತಿ ಯಾಗಿತ್ತು. ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ದೇವಳದ ಸೆಕ್ಯೂರಿಟಿ ಹಾಗೂ ಪೊಲೀಸ್ ಸಿಬ್ಬಂದಿಗಳು ಶ್ರಮಿಸುತ್ತಿದ್ದರು.

ಮಧ್ಯಾಹ್ನದ ಹೊತ್ತಿಗೆ ಸುಡು ಬಿಸಿಲಿನಲ್ಲಿ ಶ್ರೀ ದೇವಳಕ್ಕೆ ಎಲ್ಲಿ ಹತ್ತಿರ ವಾಹನ ಪಾರ್ಕಿಂಗ್ ಮಾಡಲಾಗುತ್ತೋ,ಅಲ್ಲಿಯವರೆಗೂ ವಾಹನಗಳನ್ನು ಪಾರ್ಕಿಂಗ್ ಮಾಡುವಲ್ಲಿ ವಾಹನ ಸವಾರರು ಆ ಆಚಿಂದ ಈಚೆಗೆ ಹೋಗುತ್ತಿದ್ದು ಕಂಡು ಬಂತು. ಇನ್ನು ದೇವಳದ ಅಂಗಣಗಳಲ್ಲಿ ಪೂರ್ತಿ ಭಕ್ತಾದಿಗಳು ತುಂಬಿದ್ದರು. ಎಲ್ಲಾ ಭಕ್ತಾದಿಗಳಿಗೂ ಸುಗಮ ದರ್ಶನ ಹಾಗೂ ತೀರ್ಥಪ್ರಸಾದ ಭೋಜನ ಪ್ರಸಾದ ವ್ಯವಸ್ಥೆಗಳನ್ನು ಶ್ರೀ ದೇವಳದ ವತಿಯಿಂದ ಮಾಡಲಾಗಿತ್ತು.