













ಮೂಲತಃ ತೊಡಿಕಾನ ಗ್ರಾಮದವರಾಗಿದ್ದು, ಬಳ್ಪದಲ್ಲಿ ನೆಲೆಸಿದ್ದ, ಬಳ್ಪ ಪೇಟೆಯಲ್ಲಿ ಫ್ಯಾನ್ಸಿ ಸ್ಟೋರನ್ನು ಹೊಂದಿದ್ದ ಸುದ್ದಿ ಏಜೆಂಟ್ ಜಯಚಂದ್ರ (57ವ.) ಹೃದಯಾಘಾತದಿಂದ ಕಳೆದ ರಾತ್ರಿ ನಿಧಾನರಾಗಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ, ಪುತ್ರಿ, ಸಹೋದರ, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಂತರ ಬಳ್ಪದಲ್ಲೇ ನೆರವೇರಲಿರುವುದಾಗಿ ತಿಳಿದುಬಂದಿದೆ.







