ಅರಂತೋಡು -ಅಡ್ತಲೆ ಶಾಲಾ ಬಳಿ ರಸ್ತೆಗೆ ಉರುಳಿ ಬಿದ್ದ ಮರ

0

ಶಾಲಾ ಕಾಂಪೌಂಡ್ ಗೇಟ್ ಗೆ ಹಾನಿ

ಮರ ತೆರವು ಮಾಡಿದ ಅಡ್ತಲೆ ಸಂಘ, ಸಂಸ್ಥೆಗಳ ಯುವಕರು.

ಇವತ್ತು ಬೆಳಿಗ್ಗೆ ಅಡ್ತಲೆ ಶಾಲೆಯ ಎದುರಿನ ರಸ್ತೆಯ ಆಚೆ ಭಾಗದಲ್ಲಿ ಇದ್ದ ಬೃಹತ್ ಆಕಾರದ ಮೇ ಪ್ಲವರ್ ಮರ ಆರಂತೋಡು -ಏಳಿಮಲೆ ರಸ್ತೆಗೆ ಅಡ್ಡಲಾಗಿ ಬಿದ್ದು ಅಡ್ತಲೆ ಶಾಲಾ ಗೆಟ್, ಕಾಂಪೌಂಡ್, ವಿದ್ಯುತ್ ಕಂಬಗಳು ಹಾನಿಯಾಗಿದೆ. ವಿಷಯ ತಿಳಿದ ಕೂಡಲೇ ಅಡ್ತಲೆಯ ಯುವಕರ ತಂಡ ರಸ್ತೆ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.