













ಪಂಜ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ಮಹಿಂಷಾತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇದರ ನೇಮೋತ್ಸವ ಏ.20 ಮತ್ತು21 ರಂದು ನಡೆಯಿತು. ನೇಮೋತ್ಸವದ ಲೆಕ್ಕಪತ್ರ ಮಂಡನೆ ಮತ್ತು ಸಾರ್ವಜನಿಕ ಸಭೆ ಮೇ 17 ರಂದು ಜೈ ಕರ್ನಾಟಕ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾದ ಕುಸುಮಾಧರ ಕರಿಮಜಲು ವಹಿಸಿದರು. ವೇದಿಕೆಯಲ್ಲಿ ಉತ್ಸವ ಸವಿತಿಯ ಅಧ್ಯಕ್ಷರಾದ ನೇಮಿರಾಜ್ ಕೋಟಿಯಡ್ಕ,ಕಾರ್ಯದರ್ಶಿ ರತನ್ ಕುಮಾರ್ ಶೇಡಿಗುಂಡಿ, ಟ್ರಸ್ಟ್ ನ ಕಾರ್ಯದರ್ಶಿ ಪ್ರಕಾಶ್ ಅಳ್ಪೆ,ಖಜಾಂಜಿ ಗಣೇಶ್ ಪಾಲೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ ದೈವಸ್ಥಾನದಲ್ಲಿ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿ ಕೆಲವೊಂದನ್ನು ಸಭೆಯಲ್ಲಿ ನಿರ್ಣಯಿಸಲಾಯಿತು.

ನಂತರ ನೇಮೋತ್ಸವ ನಡೆದು ಉಳಿಕೆಯ ಹಣವನ್ನು ಉತ್ಸವ ಸಮಿತಿಯಿಂದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಕಾಶ್ ಅಳ್ಪೆ ಸ್ವಾಗತಿಸಿದರು. ರತನ್ ಕುಮಾರ್ ಶೇಡಿಗುಂಡಿ ಲೆಕ್ಕ ಪತ್ರ ಮಂಡನೆ ಮಾಡಿದರು. ನೇಮಿರಾಜ್ ಕೋಟಿಯಡ್ಕ ವಂದಿಸಿದರು.. ಗುರುಪ್ರಸಾದ್ ತೋಟ ನಿರೂಪಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು.







