ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾದಲ್ಲಿ “ಬಿ ಫ್ರೆಂಡ್”ವೆಕೇಶನ್ ಕ್ಯಾಂಪ್

0

ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮತ್ತು ಸಾಹಿತ್ಯದ ಕಲರವ ಮೂಡಿಸಿದ ಶಿಕ್ಷಕರು

ಸುನ್ನೀ ಜಂಇಯ್ಯತುಲ್ ಮುಅಲ್ಲೀಮೀನ್ (ಎಸ್ ಜೆ ಎಂ )ರಾಜ್ಯ ಸಮಿತಿ ಆಯೋಜಿಸಿರುವ ಮದ್ರಸಾ ಮಟ್ಟದ “ಬಿ ಫ್ರೆಂಡ್” ವೆಕೇಶನ್ ಕ್ಯಾಂಪ್ ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾದಲ್ಲಿ ಮೇ17 ಮತ್ತು 18 ರಂದು ನಡೆಯಿತು.

ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ದೀನಿ ಶಿಕ್ಷಣ ಮತ್ತು ಸಾಹಿತ್ಯದ ಕಲರವದ ಬಗ್ಗೆ ಶಿಕ್ಷಕರು ಅರಿವು ಮೂಡಿಸಿದರು. ಮಾದರಿ ತರಗತಿ,ಕುರ್ ಆನ್ ಪಾರಾಯಣ ಶಾಸ್ತ್ರ, ಹದೀಸ್,ವ್ಯಕ್ತಿತ್ವ ವಿಕಸನ, ಆಧ್ಯಾತ್ಮಿಕ ತರಗತಿ,ವ್ಯಾಯಾಮ, ರಕ್ಷಕ ಶಿಕ್ಷಕ ಸಂಗಮ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮದ್ರಸಾ ಮುಅಲ್ಲಿಮರಾದ ಅಬ್ದುನ್ನಾಸರ್ ಸಕಾಪಿ ನೆರವೇರಿಸಿದರು. ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ ಕಟ್ಟತ್ತಾರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ,ಪ್ರಾಸ್ತಾವಿಕ ಭಾಷಣವನ್ನು ಮುಅಲ್ಲಿಂ ಯೂಸುಫ್ ನಿಝಾಮಿ ನಿರ್ವಹಿಸಿ ಹಂಝ ಸಕಾಫಿ ವಂದಿಸಿದರು.