ಮಾಣಿ ರಾಷ್ಟ್ರೀಯ ಹೆದ್ದಾರಿಯ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಮೇ 25 ರಂದು ಮೀನಿನ ಲಾರಿ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಸುಳ್ಯ ಗಾಂಧಿನಗರ ನಿವಾಸಿ ಖಲಂದರ್ ಷಾ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
















ಮೀನಿನ ಲಾರಿಗೆ ಖಲಂದರ್ ಷಾ ಅವರ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿಯ ತೀವ್ರತೆಗೆ ಅವರು ತೀವ್ರವಾಗಿ ಗಾಯಗೊಂಡಿದ್ದು ಸ್ಥಳೀಯರು ಕೂಡಲೇ ಅವರನ್ನು ಪುತ್ತೂರು ಮೆಡ್ ಲ್ಯಾಂಡ್ ಹಾಸ್ಪಿಟಲಿಗೆ ಕರೆತರಲಾಗಿದ್ದು, ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಖಲಂದರ್ ಷಾ ರವರು ಸುಳ್ಯ ಗಾಂಧಿನಗರ ನಿವಾಸಿ ಮೊಹಿದೀನ್ ಎಂಬುವವರ ಪುತ್ರರಾಗಿದ್ದು ಅವರು ಕೆಲವು ವರ್ಷಗಳಿಂದ ಪುತ್ತೂರು ಸಂಟ್ಯಾರಿನಲ್ಲಿ ವಾಸಿಸುತ್ತಿದ್ದರು.
ಸಂಪ್ಯದ ಕೆಎಂಕೆ ವುಡ್ ಫ್ಯಾಕ್ಟರಿಯಲ್ಲಿ ರೈಟರಾಗಿ ಸೇವೆ ಸಲ್ಲಿಸುತ್ತಿದ್ದರು.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.







