ಅರ್ಚಕ ವೆಂಕಟ್ರಮಣ ಪಾಂಗಣ್ಣಾಯರಿಗೆ ಬೀಳ್ಕೊಡುಗೆ ಸಮಾರಂಭ

0


ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇಲ್ಲಿ ಪ್ರಧಾನ ಅರ್ಚಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಇದೀಗ ವಯೋ ಸಹಜ ನಿವೃತ್ತಿ ಹೊಂದಿದ ವೆಂಕಟರಮಣ ಪಾಂಗಣ್ಣಾಯರವರಿಗೆ ಗೌರವಾರ್ಪಣೆ ಮತ್ತು ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಅರ್ಚಕರಿಗೆ ಸ್ವಾಗತ ಕಾರ್ಯಕ್ರಮ ಇಂದು ಕ್ಷೇತ್ರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆಯವರು ವಹಿಸಿ, ಪ್ರಧಾನ ಅರ್ಚಕರಿಗೆ ಕ್ಷೇತ್ರದ ವತಿಯಿಂದ ಉಡುಗೊರೆಯನ್ನಿತ್ತು ಸನ್ಮಾನಿಸಿ, ಅವರ ಸುದೀರ್ಘ ಕಾಲದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.

ಸಭಿಕರ ಪರವಾಗಿ ಮಾಜಿ ಮೊಕ್ತೇಸರರಾದ ಲೋಕನಾಥ ಅಮಚೂರು ಮತ್ತು ಸುರೇಶ ಪೆರುಮುಂಡ ಹಾಗೂ ಆರ್.ಡಿ. ಆನಂದರವರು ಮಾತನಾಡಿದರು. ವೆಂಕಟರಮಣ ಪಾಂಗಣ್ಣಾಯರವರು ಸನ್ಮಾನವನ್ನು ಸ್ವೀಕರಿಸಿ ಶುಭಹಾರೈಸಿದರು. ನೂತನ ಅರ್ಚಕರಾಗಿ ಆಯ್ಕೆಯಾದ ಅಕ್ಷಯ ಭಟ್ ರವರನ್ನು ಪ್ರಧಾನ ಅರ್ಚಕರು ಶಾಲು ಹೊದಿಸಿ ಸ್ವಾಗತಿಸಿ ಆಶೀರ್ವದಿಸಿದರು.