ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ ಗೌಡ ಅಡ್ತಲೆ ನಿಧನ

0

ಆರಂತೋಡು ಗ್ರಾಮದ ಅಡ್ತಲೆ ಮನೆ ಪರಮೇಶ್ವರ ಗೌಡ ರವರು ಇವತ್ತು ಮುಂಜಾನೆ ನಿಧನರದರು. ಅವರಿಗೆ 75 ವರ್ಷವಾಗಿತ್ತು. ಅವರು ಮೊದಲು ಪದವೀಧರರಾಗಿ ಕೆ. ಈ. ಬಿ ಉದ್ಯೋಗ ನಿರ್ವಹಿಸಿ ನಂತರ ಪದವೀಧರ ಮಿತವೇತನ ಶಿಕ್ಷಕರಾಗಿ ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆಯಲ್ಲಿ ಮರ್ಕಂಜದಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಸರಕಾರಿ ಉದ್ಯೋಗ ಪಡೆದು ಮರ್ಕಂಜ ಮತ್ತು ಸರಪಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೇವೆ ಸಲ್ಲಿಸಿ ಪದೋನ್ನತಿ ಪಡೆದು ಬಜ್ಪೆ ಗ್ರಾಮ ಪಂಚಾಯತ್ ಗೇರ್ಡ್ 1 ಕಾರ್ಯದರ್ಶಿ ಸೇವೆ ಸಲ್ಲಿಸಿ ದಿನಾಂಕ 30.11.2011 ರಂದು ನಿವೃತ್ತರಾಗಿದ್ದರು.

ಮೃತರು ಪತ್ನಿ ಶ್ರೀಮತಿ ಪುಷ್ಪವೇಣಿ, ಮಗಳು ಸುಪ್ರಿಯಾ, ಮಗ ಸುಭಾಷ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ..