ಮುಪ್ಪೇರ್ಯ: ಮಗನ ಮೃತದೇಹವನ್ನು ಕಂಡು ಅಸ್ವಸ್ಥಗೊಂಡ ತಾಯಿಯೂ ಮೃತ್ಯು

0

ಮುಪ್ಪೇರ್ಯ ಗ್ರಾಮದ ಟಪ್ಪಾಲುಕಟ್ಟೆ ಎಂಬಲ್ಲಿ ವಾಸವಾಗಿದ್ದ ದಿ.ನಾರಾಯಣ ನಾಯ್ಕರ ಪತ್ನಿ ಶ್ರೀಮತಿ ಗಿರಿಜಾರವರು ತಮ್ಮ ಮಗನ ನಿಧನದ ವಾರ್ತೆ ತಿಳಿದು ಕುಸಿದು ಬಿದ್ದು ಬಳಿಕ ಮೃತಪಟ್ಟ ಘಟನೆ ಜೂ. 6 ರಂದು ನಡೆದಿದೆ.
ದಿ. ನಾರಾಯಣ ನಾಯ್ಕರ ಪುತ್ರ
ಪರಮೇಶ್ವರ (ಈಶ್ವರ) ನಾಯ್ಕ ಟಪ್ಪಾಲುಕಟ್ಟೆಯವರು ಬಿದ್ದು ತಲೆಗೆ ಪೆಟ್ಟಾಗಿ ಸುಳ್ಯದ ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಜೂ .6ರಂದು ಮೃತಪಟ್ಟಿದ್ದರು. ಪರಮೇಶ್ವರ ನಾಯ್ಕರ ಮೃತ ದೇಹವನ್ನು ಅವರ ಮನೆಗೆ ತಂದಾಗ ಮಗ ಮೃತಪಟ್ಟ ವಿಷಯ ತಿಳಿದ ತಾಯಿ ಗಿರಿಜಾ ಆಘಾತಕ್ಕೊಳಗಾಗಿ ಕುಸಿದು ಬಿದ್ದರು. ಬಳಿಕ ಅವರನ್ನು ಅಯ್ಯನಕಟ್ಟೆ ಕ್ಲಿನಿಕ್ ಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಆದರೆ ಮನೆಯವರಿಗೆ ವಿಷಯ ತಿಳಿದರೆ ಆಘಾತಕ್ಕೊಳಗಾಗುತ್ತಾರೆಂದು ಅವರ ಮೃತದೇಹವನ್ನು ಸುಳ್ಯದಲ್ಲೇ ಶೈತ್ಯಾಗಾರದಲ್ಲಿ ಇರಿಸಲಾಯಿತು. ಮೃತ ಗಿರಿಜಾರ ಅಳಿಯ ಗಣೇಶ್ ರು ಲಡಾಕ್ ನಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಊರಿಗೆ ಬಂದ ಬಳಿಕ ಜೂ.8 ರಂದು ಮೃತದೇಹವನ್ನು ಮೃತರ ಸ್ವಗೃಹಕ್ಕೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತ ಶ್ರೀಮತಿ ಗಿರಿಜರವರು ಪುತ್ರ ರೂಪರಾಜ್, ಪುತ್ರಿ ಶ್ರೀಮತಿ ಆಶಾಲತಾ ಎಡಮಂಗಲ, ಸಹೋದರ ಹುಕ್ರಪ್ಪ ನಾಯ್ಕ ಮಣಿಮಜಲು ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.