ಕರ್ನಾಟಕ ಯುಜಿ ಸಿಇಡಿ 2026 ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಮನ್ಯು ಎನ್. ಶೆಟ್ಟಿ ಅರ್ಹತೆ

0

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KBA) ಏಪ್ರಿಲ್ ತಿಂಗಳಲ್ಲಿ ನಡೆಸಿದ ಕೆ.ಸಿಇಡಿ 2026 ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸುಳ್ಯದ ಸಮನ್ಯು ಎನ್ ಶೆಟ್ಟಿ ಅವರು ಅರ್ಹತೆಯನ್ನು ಪಡೆದಿರುತ್ತಾರೆ.

ಇಂಜಿನಿಯರಿಂಗ್ ವಿಭಾಗ 450ನೇ ರ್ಯಾಂಕ್, ಕೃಷಿ ವಿಜ್ಞಾನ 68, ವೆಟನರಿ 456, ಡಿ ಫಾರ್ಮಾ 72, ಸೆರಿಕಲ್ಚರ್ 68, ನ್ಯಾಚುರೋಪತಿ ಯೋಗ 186, ಬಿ ಫಾರ್ಮಾ 665, ಫಡ್ ಸಯನ್ಸ್ 68, ನರ್ಸಿಂಗ್ 457, ಅಗ್ರಿ Bsc 68 ಲಭಿಸಿದೆ.

ಸುಳ್ಯ ಬೀರಮಂಗಲ ನಿವಾಸಿ ಸಂದರ್ಶನ ಕೃಷಿ ಏಜೆನ್ಸೀಸ್ ಮಾಲಕ ದಿ.ಸುದೀಶ್ ಕುಮಾರ್ ಶೆಟ್ಟಿ ಮತ್ತು ಅಕ್ಷತಾ ಎಸ್ ಶೆಟ್ಟಿ ಇವರ ಪುತ್ರ

ಕೆವಿಜಿ ಐಪಿಎಸ್ ಹಾಗೂ ಸಂತ್ ಜೋಸೆಫ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ. ಪ್ರಸ್ತುತ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಪಿಯುಸಿ ವ್ಯಾಸಂಗವನ್ನು 600 ಕ್ಕೆ 598 (99.67%) ಪಡೆದು ರಾಜ್ಯಕ್ಕೆ ಟಾಪರ್ ಆಗಿರುತ್ತಾರೆ. ಹಾಗೂ UPSC ಏಪ್ರಿಲ್ ನಲ್ಲಿ ನಡೆಸಿದ NDA ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜುಲೈನಲ್ಲಿ ನಡೆಯುವ SSB ಸಂದರ್ಶನಕ್ಕೆ ಇಂಟರ್ವ್ಯೂಗೆ ಆಯ್ಕೆಯಾಗಿರುತ್ತಾರೆ.