ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026–27ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಜೂನ್ 8ರಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಲಾಯಿತು. ವಿದ್ಯಾರ್ಥಿಗಳಿಗೆ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸುವ ಉದ್ದೇಶದಿಂದ ಚುನಾವಣೆಯನ್ನು EVM ಮೊಬೈಲ್ ಆ್ಯಪ್ ಬಳಸಿ ನಡೆಸಲಾಯಿತು. ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.















ಚುನಾವಣೆಗೆ ಮುನ್ನ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಅಭ್ಯರ್ಥಿಗಳ ಪರಿಚಯ, ಪ್ರಚಾರ, ಮತದಾರರ ಪಟ್ಟಿ ತಯಾರಿ ಹಾಗೂ ಮತದಾನ ಸೇರಿದಂತೆ ಚುನಾವಣೆಯ ಎಲ್ಲಾ ಹಂತಗಳನ್ನು ನೈಜ ಚುನಾವಣೆಯ ಮಾದರಿಯಲ್ಲಿಯೇ ಅನುಸರಿಸಲಾಯಿತು. ಮತದಾನದ ದಿನ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು EVM ಮೊಬೈಲ್ ಆ್ಯಪ್ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಯಿತು. ಮತ ಎಣಿಕೆಯು ಕ್ಷಣಾರ್ಧದಲ್ಲಿ ಪೂರ್ಣಗೊಂಡು ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಈ ವಿಧಾನದಿಂದ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಬಳಕೆ, ಚುನಾವಣಾ ಪ್ರಕ್ರಿಯೆಯ ಸರಳತೆ, ಮತದಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ನೇರ ಅನುಭವ ದೊರೆಯಿತು. ನೈಜ ಚುನಾವಣೆಯ ಅನುಭವವನ್ನು ಶಾಲಾ ಹಂತದಲ್ಲಿಯೇ ಕಲಿಸುವ ಈ ವಿನೂತನ ಪ್ರಯತ್ನವು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮುಖ್ಯಮಂತ್ರಿಯಾಗಿ ಶ್ರೀಜಿತ್ ಪಿ ವಿ ಉಪಮುಖ್ಯಮಂತ್ರಿಯಾಗಿ ಮೋಹಕ್ ಎಚ್ . ಆಯ್ಕೆಯಾದರು. ವಿದ್ಯಾಮಂತ್ರಿಯಾಗಿ ವೈಷ್ಣವಿ , ಉಪ ವಿದ್ಯಾಮಂತ್ರಿಯಾಗಿ ಶಾರ್ವಿ ಪಿ.ವಿ , ಶಿಸ್ತುಮಂತ್ರಿಯಾಗಿ ಪ್ರತೀಕ್ಷಾ ಪಿ , ಉಪಶಿಸ್ತು ಮಂತ್ರಿಯಾಗಿ ಅರ್ಪಿತಾ ಶೆಟ್ಟಿ , ಆರೋಗ್ಯ ಮಂತ್ರಿಯಾಗಿ ಹರ್ಷಿತಾ , ಉಪ ಆರೋಗ್ಯ ಮಂತ್ರಿಯಾಗಿ ಕುಶಿತಾ ಬಿ, ಗೃಹ ಮಂತ್ರಿಯಾಗಿ ಜೆ.ಪಿ ಆದ್ಯಾ , ಉಪ ಗೃಹ ಮಂತ್ರಿಯಾಗಿ ಧನ್ವಿತ್ ಡಿ.ಪಿ , ಸಾಂಸ್ಕೃತಿಕ ಮಂತ್ರಿಯಾಗಿ ಪೂರ್ವಿ , ಉಪ ಸಾಂಸ್ಕೃತಿಕ ಮಂತ್ರಿಯಾಗಿ ಖದೀಜಾ ನಿದಾ , ಕೃಷಿ ಮಂತ್ರಿಯಾಗಿ ಶ್ರೇಯಸ್ , ಉಪ ಕೃಷಿ ಮಂತ್ರಿಯಾಗಿ ಹವೀನ್ ಕೆ.ಪಿ , ನೀರಾವರಿ ಮಂತ್ರಿಯಾಗಿ ಸನ್ವಿತ್ ,ಉಪ ನೀರಾವರಿ ಮಂತ್ರಿಯಾಗಿ ಧನ್ವಿತ್ ಡಿ.ಪಿ, ವಾರ್ತಾ ಮಂತ್ರಿಯಾಗಿ ಯಶ್ಮಿತಾ , ಉಪ ವಾರ್ತಾ ಮಂತ್ರಿಯಾಗಿ ನಿರೀಕ್ಷಾ, ಗ್ರಂಥಾಲಯ ಮಂತ್ರಿಯಾಗಿ ಪೂಜಾ ಪಿ.ವಿ , ಉಪ ಗ್ರಂಥಾಲಯ ಮಂತ್ರಿಗಳಾಗಿ ಪೂರ್ವಿಕಾ ಎಂ, ಸ್ವಚ್ಚತಾ ಮಂತ್ರಿಯಾಗಿ ರಕ್ಷಾ , ಉಪ ಸ್ವಚ್ಚತಾ ಮಂತ್ರಿಗಳಾಗಿ ಧನ್ವಿತ್ , ಕ್ರೀಡಾ ಮಂತ್ರಿಯಾಗಿ ಅವಲೋಕಿತಾ ಎಸ್.ಜೆ , ಉಪ ಕ್ರೀಡಾ ಮಂತ್ರಿಯಾಗಿ ಪ್ರತೀಕ್ಷಾ , ಅಕ್ಷರ ದಾಸೋಹ ಮಂತ್ರಿಯಾಗಿ ಜೀವನ್ ಕುಮಾರ್, ಉಪ ಅಕ್ಷರ ದಾಸೋಹ ಮಂತ್ರಿಗಳಾಗಿ ಅವಲೋಕಿತಾ ಎಸ್.ಜೆ ಹಾಗೂ ವಿರೋಧ ಪಕ್ಷದ ನಾಯಕರಾಗಿ ಪೂಜಾ ಪಿ.ವಿ, ಪೂರ್ವಿಕಾ ಎಂ. ಆಯ್ಕೆಯಾದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾಂತಮ್ಮ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲಾಯಿತು. ಬಳಿಕ ಸಹ ಶಿಕ್ಷಕಿ ಶ್ರೀಮತಿ ರತ್ನಾವತಿ ಬಿ. ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೂತನ ಮಂತ್ರಿಮಂಡಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಮಕ್ಕಳ ಹಕ್ಕುಗಳ ಕ್ಲಬ್ ಅಡಿಯಲ್ಲಿ ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಮಹತ್ವ, ನಾಯಕತ್ವ ಗುಣಗಳು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವ ಪಾಠವನ್ನು ಕಲಿಸಲಾಯಿತು. ಶಾಲೆಯ ಈ ವಿನೂತನ ಚುನಾವಣಾ ಪ್ರಕ್ರಿಯೆಯು ವಿದ್ಯಾರ್ಥಿಗಳಲ್ಲಿ ವಿಶೇಷ ಉತ್ಸಾಹ ಮತ್ತು ಆಸಕ್ತಿಯನ್ನು ಮೂಡಿಸಿತು.







