ಚಿತ್ರದುರ್ಗದ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಜೂ. 6 ಮತ್ತು 7 ರಂದು ತರಳಬಾಳಿನ ಎಲ್ಲಾ ವಿದ್ಯಾ ಸಂಸ್ಥೆಗಳ 80ಕ್ಕೂ ಹೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಡೆದ ಯೋಗಾಸನ ಕಾರ್ಯಾಗಾರದಲ್ಲಿ














2025-26ರಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ 14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ತೃತೀಯ ಸ್ಥಾನ ಹಾಗೂ ಕಂಚಿನ ಪದಕ ತಂದುಕೊಟ್ಟ ಸೋನಾ ಅಡ್ಕಾರ್ ಅವರನ್ನು ಶ್ರೀ ತರಳ ಬಾಳು ಸಿರಿಗೆರೆಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.

ರಾಷ್ಟ್ರೀಯ ಯೋಗ ತರಬೇತುದಾರರಾದ ನವೀನ್ ಕಡೂರ್ ಮತ್ತು ರಂಜಿತ್ ಕಡೂರ್ ತರಬೇತಿ ನೀಡಿದ್ದರು.
ಸೋನಾ ಅಡ್ಕಾರ್ ಅವರು ಮಹಾತ್ಮಗಾಂಧಿ ಮಲ್ನಾಡ್ ಶಾಲೆ, ಕೊಡಿಯಾಲಬೈಲು, ಸುಳ್ಯ ಇಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಮತ್ತು ಶೋಭಾ ಶರತ್ ಅಡ್ಕಾರ್ ಅವರ ಪುತ್ರಿಯಾಗಿದ್ದಾರೆ.







