ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಪ್ರಿಲ್ ತಿಂಗಳಲ್ಲಿ ನಡೆಸಿದ ಕೆಸಿಇಟಿ 2026 ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸುಳ್ಯದ ಸಮನ್ಯು ಎಸ್. ಶೆಟ್ಟಿ ಅವರು ಅರ್ಹತೆಯನ್ನು ಪಡೆದಿರುತ್ತಾರೆ.














ಇಂಜಿನಿಯರಿಂಗ್ 450, ಫುಡ್ ಸೈ 68, ಅಗ್ರಿ (ಬಿ.ಎಸ್ಸಿ) 68, ಸೆರಿಕಲ್ಚರ್ 68, ಬಿಪಿಟಿ: 72, ಡಿ-ಫಾರ್ಮಾ 72, ಬಿ.ಎಸ್ಸಿ AHS 72,ನ್ಯಾಚುರೋಪತಿ & ಯೋಗ 186,
ಬಿಪಿಒ 253, ವೆಟರ್ ಸೈ 456, ನರ್ಸಿಂಗ್ 457, ಬಿ-ಫಾರ್ಮಾ 665, ಫಾರ್ಮ್-ಡಿ 665 ಇವರು ಪಡೆದ ರ್ಯಾಂಕ್ಗಳು.
ಸುಳ್ಯದ ಬೀರಮಂಗಲ ನಿವಾಸಿ ಸುದರ್ಶನ್ ಕೃಷಿ ಏಜೆನ್ಸಿಸ್ ಸರ್ವಿಸಸ್ ಅಂಡ್ ಸಪ್ಲೈಸ್ ಮಾಲಕ ದಿ.ಸುದೀಶ್ ಕುಮಾರ್ ಶೆಟ್ಟಿ ಮತ್ತು ಅಕ್ಷತಾ ಎಸ್ ಶೆಟ್ಟಿ ಇವರ ಪುತ್ರ.
ಕೆವಿಜಿ ಐಪಿಎಸ್ ಹಾಗೂ ಸಂತ ಜೋಸೆಫ್ ಪ್ರೌಢಶಾಲೆ ಸುಳ್ಯ ಇಲ್ಲಿಯ ಹಿರಿಯ ವಿದ್ಯಾರ್ಥಿ. ಪ್ರಸ್ತುತ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಪಿಯುಸಿ ವ್ಯಾಸಂಗವನ್ನು ನಡೆಸಿ 600 ಕ್ಕೆ 598 ಅಂಕ (99.67%) ಪಡೆದು ರಾಜ್ಯಕ್ಕೆ ಟಾಪರ್ ಆಗಿರುತ್ತಾರೆ. ಹಾಗೂ UPSC ಏಪ್ರಿಲ್ ನಲ್ಲಿ ನಡೆಸಿದ NDA ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜುಲೈನಲ್ಲಿ ನಡೆಯುವ SSB ಇಂಟರ್ವ್ಯೂಗೆ ಆಯ್ಕೆಯಾಗಿರುತ್ತಾರೆ.







