













ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಹಲವು ಮಾಜಿ ಮುಖ್ಯಮಂತ್ರಿಗಳ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಬೆಂಗಳೂರಿನ ಮನೆಗೂ ಭೇಟಿ ನೀಡಿದರು.

ಡಿ.ವಿ.ಸದಾನಂದ ಗೌಡ, ಪತ್ನಿ ಡಾಟಿ ಸದಾನಂದ, ಪುತ್ರ ಕಾರ್ತಿಕ್, ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸದಾನಂದ ಗೌಡರ ಮೊಮ್ಮಕ್ಕಳಾದ ಹಿತಾಂಶ ಮತ್ತು ದೇವಾಂಶ್ ಮುಖ್ಯಮಂತ್ರಿಗಳಿಗೆ ತಾವು ರಚಿಸಿದ ಶುಭಹಾರೈಕೆಯ ಚಿತ್ರಗಳನ್ನು ಉಡುಗೊರೆಯಾಗಿ ನೀಡಿದರು. ಡಿ.ವಿ.ಸದಾನಂದ ಗೌಡರು ಡಿ.ಕೆ.ಶಿವಕುಮಾರ್ ಅವರಿಗೆ ಕೆಲವು ಸಲಹೆ ಸೂಚನೆಗಳನ್ನೂ ನೀಡಿದರು.











