ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

0

ಕಲ್ಕುಡ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಇಂದು ಬೆಳಗ್ಗೆ ನೆರವೇರಿತು.

ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಪ್ಪರ ಕೆಲಸಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿಆಡಳಿತ ಧರ್ಮದರ್ಶಿಗಳಾದ ಪಿ.ಕೆ.ಉಮೇಶ್ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಹಾಗೂ ಗುರುಪ್ರಸಾದ್ ಶಾಮಿಯಾನದ ಮಾಲಕರಾದ ಜಿ.ಜಿ.ನಾಯಕ್, ಸಮಿತಿ ಸದಸ್ಯರಾದ ಚಂದ್ರಶೇಖರ ಪಿ.ಆರ್, ಸತ್ಯಪ್ರಸಾದ್ ಕೆ, ಕೋಶಾಧಿಕಾರಿ ಅವಿನಾಶ್ ಕುರುಂಜಿ, ಗೋಪಾಲಕೃಷ್ಣ ಕೆ.ಎಸ್, ಗುರುದತ್ ನಾಯಕ್, ಪೂಜಾರಿ ತಿಮ್ಮಪ್ಪ ಗೌಡ ನಾವೂರು ಮತ್ತಿತರರು ಉಪಸ್ಥಿತರಿದ್ದರು.