ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ತ್ರೈಮಾಸಿಕ ಸಭೆ

0

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯದ “ತ್ರೈಮಾಸಿಕ” ಸಭೆಯು ಕಲ್ಲುಗುಂಡಿಯ ಶ್ರೀ ದುರ್ಗಾಪರಮೇಶ್ವರಿ ಮಂದಿರ , ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ಅಧ್ಯಕ್ಷತೆಯಲ್ಲಿ ಜೂ 7 ರಂದು ನಡೆಯಿತು.

ಸಭೆಯ ಉದ್ಘಾಟನೆಯನ್ನು ಹಿರಿಯರಾದ ಕೊಂದಲಕಾಡು ನಾರಾಯಣ ಭಟ್ ದೀಪ ಪ್ರಜ್ವಲಿಸಿದರು. ಬಳಿಕ ಸಭೆಯಲ್ಲಿ ಜುಲೈ ತಿಂಗಳಲ್ಲಿ( ಕಲ್ಲು ಗುಂಡಿಯಲ್ಲಿ ) ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಉದ್ಘಾಟನೆಯನ್ನು ಪ್ರಾರಂಭಿಸಿ, “ಆರೋಗ್ಯ ಶಿಬಿರ” ವನ್ನು ಆಯೋಜಿಸುವುದು ಹಾಗೇ ಅಕ್ಟೋಬರ್ ತಿಂಗಳಲ್ಲಿ 1 ವಾರದ ಭಜನೆ ಹಾಗೂ ಕುಣಿತ ಭಜನೆ, ಸಂಸ್ಕಾರ ತರಬೇತಿಯನ್ನು ನಡೆಸುವುದಾಗಿ ಚರ್ಚಿಸಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀ ಸೋಮಶೇಖರ್ ಪೈಕ, ಕಾರ್ಯದರ್ಶಿ ಶ್ರೀ ನಾರಾಯಣ ಅಜ್ಜಿಕಲ್ಲು, ಉಪಾಧ್ಯಕ್ಷರಾದ ಶ್ರೀಮತಿ ಭಾರತಿ ವಿ ಭಟ್ ಮೈರಾಜೆ, ಶ್ರೀ ಚಂದ್ರಶೇಖರ್ ಆಚಾರ್ಯ ತೊಡಿಕಾನ, ವಲಯ ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಕೊಡಗು-ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಬಾಲಚಂದ್ರ ಕಳಗಿ, ಶ್ರೀ ರಾಮಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ರಾಜಗೋಪಾಲ ಉಳುವಾರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಶ್ರೀ ಶ್ರೀಧರ ದುಗ್ಗಳ, ಶ್ರೀ ಮಾಧವ ಗೌಡ ಪೇರಾಲು, ಶ್ರೀ ನಾಗೇಶ್ ಪೇರಾಲು, ಶ್ರೀ ಪ್ರೇಮ್ ಕುಮಾರ್ ಆಚಾರ್ಯ ಕೀಲಾರುಬೈಲು, ಶ್ರೀ ಪ್ರೀತಂ ಬಂಟೋಡಿ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಶ್ರೀ ಆನಂದ್ ಡಿ.ಪಿ. ಬಳ್ಪ, ಶ್ರೀ ಕೆ.ಕೆ.ಶ್ರೀಧರ ಕಡೆಪಾಲ, ಶ್ರೀ ತ್ಯಾಗರಾಜ್ ನೆಲ್ಲಿಕುಮೇರಿ, ಶ್ರೀಮತಿ ರಜನಿ ಶರತ್, ಸೇವಾ ಪ್ರತಿನಿಧಿಗಳಾದ ಶ್ರೀಮತಿ ಜಯಲಕ್ಷ್ಮೀ, ಶ್ರೀಮತಿ ಕಲ್ಪನಾ, ಹಾಗೂ ಭಜನಾ ಮಂಡಳಿಗಳ ಸದಸ್ಯರುಗಳಾದ ಶ್ರೀ ವಿಕ್ರಾಂತ್ ಎಂ.ಬಿ, ಶ್ರೀಮತಿ ಲೀಲಾವತಿ ಕಳಾಯಿ, ಶ್ರೀಮತಿ ಸಾವಿತ್ರಿ ಕೊರಗಪ್ಪ ಮತ್ತು ವಿವಿಧ ಭಜನಾ ಮಂಡಳಿ ಹಾಗೂ ಸಂಘ – ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು, ಒಕ್ಕೂಟದ ಅಧ್ಯಕ್ಷರಾದ ಈಶ್ವರ ಆಚಾರ್ಯ ಸ್ವಾಗತಿಸಿ ,ಚಂದ್ರಶೇಖರ ಆಚಾರ್ಯರವರ ವಂದಿಸಿದರು.