














ಪ್ರತಿ ವರ್ಷದಂತೆ ಈ ವರ್ಷ ಕೂಡ ಅಕ್ಟೋಬರ್ ತಿಂಗಳಲ್ಲಿ ಬರುವ ಸುಳ್ಯದ ದಸರಾ ಉತ್ಸವವನ್ನು ಅದ್ಧೂರಿಯಾಗಿ ನಡೆಸುವ ದೃಷ್ಟಿಯಿಂದ ಪೂರ್ವಭಾವಿ ಸಭೆಯನ್ನು ಜೂ. ೮ರಂದು ತಾಲೂಕ್ ಪಂಚಾಯತಿನ ಸಭಾಭವನದಲ್ಲಿ ನಡೆಸಲಾಯಿತು.

ಡಾ. ಲೀಲಾಧರ್ ಡಿ.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಳೆದ ಸಾಲಿನಲ್ಲಿದ್ದ ನ್ಯೂನ್ಯತೆಗಳ ಬಗ್ಗೆ ತಿಳಿಸಿ ಅದನ್ನು ಈ ಸಲ ಸರಿಪಡಿಸುವ ಬಗ್ಗೆ ತಿಳಿಸಿದರು. ಎಸ್೬ ಇದರ ಅಧ್ಯಕ್ಷ ನಾರಾಯಣ ಕೇಕಡ್ಕ ಕಾರ್ಯಕ್ರಮದ ವಿವರ ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಲತಾ ಮಧುಸೂದನ್, ಶ್ರೀಮತಿ ಯಶೋದಾ ರಾಮಚಂದ್ರ, ಹಿರಿಯರಾದ ಕೃಷ್ಣ ಕಾಮತ್, ಗೋಕುಲದಾಸ್ , ಎಂ.ವೆಂಕಪ್ಪ ಗೌಡ, ಜಯಪ್ರಕಾಶ್ ರೈ, ಕೆ.ಎಲ್. ಸತೀಶ್, ಅಶೋಕ್ ಪ್ರಭು, ರಾಜು ಪಂಡಿತ್, ಸುನಿಲ್ ಕೇರ್ಪಳ
ಸುನಿಲ್ ಕೇರ್ಪಳ ಸ್ವಾಗತಿಸಿ, ರಾಜು ಪಂಡಿತ್ ವಂದಿಸಿದರು. ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.












