













ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪ ಶ್ರೀದೇವಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ರಸ್ತೆ ದಾಟುತಿದ್ದ ವ್ಯಕ್ತಿಗೆ ಸ್ಕೂಟಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಜಾಲ್ಸೂರು ಗ್ರಾಮದ ಬೈತಡ್ಕ ನಿವಾಸಿ, ಸುಳ್ಯದಲ್ಲಿ ಸಿ.ಎ. ಆಗಿರುವ ಸುಬ್ರಹ್ಮಣ್ಯ ಎಂಬವರು ರಸ್ತೆ ದಾಟುತಿದ್ದಾಗ ಸ್ಕೂಟಿಯೊಂದು ಢಿಕ್ಕಿಯಾಯಿತು. ಆ ರಸ್ತೆಯಾಗಿ ಬಂದ ಪ್ರಗತಿ ಅಚ್ಚು ರವರು ಗಾಯಾಳು ಸುಬ್ರಹ್ಮಣಿಯವರನ್ನು ತಮ್ಮ ಅಟೋ ರಿಕ್ಷಾದಲ್ಲಿ ಹಾಕಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆದುಕೊಂಡು ಬಂದರು. ತಲೆಗೆ ಗಂಭೀರ ಗಾಯವಾಗಿರುವುದಾಗಿ ಹೇಳಲಾಗಿದೆ.







