













ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆದ ಸುಳ್ಯದ ನಿವಾಸಿಗಳಿಗೆ ದಂಡ ವಿಧಿಸಿದ ಘಟನೆ ಜೂ.10 ರಂದು ನಡೆದಿದೆ.
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಸುಳ್ಯ ನಿವಾಸಿ ಭೂಮ್ ಸಿಂಗ್ ಎಂಬಾತನಿಗೆ ರೂ 5000.00 ದಂಡ ವಿಧಿಸಲಾಯಿತು.

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಗ್ರಾಮ ಪಂಚಾಯತ್ ಕಛೇರಿಗೆ ಕರೆಸಿ ದಂಡ ವಿಧಿಸಿದರು.







