ದೊಡ್ಡತೋಟ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಮಹೋತ್ಸವ -ಸಾರ್ವಜನಿಕ ರಾಮ ತಾರಕ ಯಜ್ಞ ಸಂಪನ್ನ

0

ಅಮರಮುಡ್ನೂರು ಗ್ರಾಮದ ದೊಡ್ಡತೋಟದಲ್ಲಿ ಬಹಳ ವರುಷಗಳ ಇತಿಹಾಸವಿರುವ ಹಿರಿಯರು ಸ್ಥಾಪಿಸಲಾಗಿರುವ ಶ್ರೀ ರಾಮ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯವು ಪೂರ್ಣಗೊಂಡು ಜೂ. 9 ಮತ್ತು 10 ರಂದು ನೂತನ ಭಜನಾ ಮಂದಿರದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವವು ವಿವಿಧ ವೈದಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.

ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ
ಹಾಗೂ ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಮಂದಿರದ ಪುನರ್ ನಿರ್ಮಾಣ ಕಾರ್ಯವು ನಡೆದು ರಾಮಚಂದ್ರ ಶಬರಾಯರವರ ಮಾರ್ಗದರ್ಶನದಲ್ಲಿ ಶ್ರೀಹರಿ ಯಳಚಿತ್ತಾಯರವರ ನೇತೃತ್ವದಲ್ಲಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಗಳು ನಡೆಯಿತು.
ಈ ಸಂದರ್ಭದಲ್ಲಿ ಆಗಮಿಸಿದ ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸ್ವಾಮೀಜಿಯವರನ್ನು ಸ್ಯಾಕ್ಸ್ ಫೋನ್ ವಾದನ ಹಾಗೂ ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು.

ವಿಶೇಷವಾಗಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಸಾರ್ವಜನಿಕ ಶ್ರೀ ರಾಮ ತಾರಕ ಯಜ್ಞವನ್ನು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ ಮಾಡಿ ಪ್ರಸಾದ ನೀಡಲಾಯಿತು.

ಜೂ. 9 ರಂದು ಸಂಜೆ ಅಘೋರಹೋಮ ಮತ್ತು ವಾಸ್ತುಪೂಜೆಯು ನಡೆಯಿತು. ಮರುದಿನ ಬೆಳಗ್ಗೆ ಗಣಪತಿ ಹವನವಾಗಿ ಪೂರ್ವಾಹ್ನ ಗಂಟೆ 9-33 ರ ಶುಭ ಮುಹೂರ್ತದಲ್ಲಿ ಛಾಯಾಬಿಂಬ ಪ್ರತಿಷ್ಠೆಯಾಯಿತು.

ಬೆಳಗ್ಗೆ ಸ್ಥಳೀಯ ವಿವಿಧ ಭಜನಾ ಮಂಡಳಿಯ ವರಿಂದ ಭಜನಾ ಸೇವೆಯು ಜರುಗಿತು. ರಾಮತಾರಕ ಯಜ್ಞವು ನಡೆದು ಮಧ್ಯಾಹ್ನ ಪೂರ್ಣಾಹುತಿಯಾಗಿ ಮಹಾ ಮಂಗಳಾರತಿಯಾಗಿ ಪ್ರಸಾದವಿತರಣೆಯಾಯಿತು.ಈ ಸಂದರ್ಭದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.

ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮಹೇಶ್ ಮೇರ್ಕಜೆ , ಉಪಾಧ್ಯಕ್ಷ ದಾಮೋದರ ಕೆ, ಕಾರ್ಯದರ್ಶಿ ಪ್ರವೀಣ್ ಎಸ್.ರಾವ್, ಜತೆ ಕಾರ್ಯದರ್ಶಿ ಹರೀಶ್ ಜಿ, ಕೋಶಾಧಿಕಾರಿ ಮಾಧವ ಎನ್, ಜತೆ ಕೋಶಾಧಿಕಾರಿ ಶರತ್ ಕೆ, ಭಜನಾ ಮಂಡಳಿಯ ಅಧ್ಯಕ್ಷ ಹಿಮಕರ ಎನ್ ಹಾಗೂ ಸದಸ್ಯರಾದ ಸುರೇಶ್ ಎಂ, ಪ್ರವೀಣ್ ಎಂ, ಪುನೀತ್ ಕೆ, ಚಂದ್ರಶೇಖರ ಎಂ, ಉದಯಕುಮಾರ್ ಎಂ, ರವಿಚಂದ್ರ ಕೆ, ಚಂದ್ರಹಾಸ ಕೆ, ಕರುಣಾಕರ ಕೆ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಕುಸುಮಾವತಿ ಎ, ಶ್ರೀಮತಿ ನವೀನಕುಮಾರಿ ಬಿ.ಎಸ್, ಶ್ರೀಮತಿ ಪವಿತ್ರ ಉಪಸ್ಥಿತರಿದ್ದರು. ಉಪ ಸಮಿತಿ ಸದಸ್ಯರು ಸ್ವಯಂ ಸೇಕರಾಗಿ ಸಹಕರಿಸಿದರು.

ದೊಡ್ಡತೋಟ ಪ್ರದೇಶದಲ್ಲಿ ಧರ್ಮ ಸಂಸ್ಕೃತಿಯ ಅನಾವರಣವಾಗಿದೆ.
ಶ್ರೀ ರಾಮನ ಪ್ರೇರಣೆಯಿಂದ ರಾಮ ತಾರಕ ಯಜ್ಞ ನಡೆದಿದೆ. ಭಾರತ ದೇಶದ ಮೌಲ್ಯವೇಆಧ್ಯಾತ್ಮಿಕದಲ್ಲಿದೆ. ಭಜನೆಯಿಂದ ಭಕ್ತಿಯ ಒಳಗಣ್ಣು ತೆರೆಯಲು ಸಾಧ್ಯ. ಭವಸಾಗರವನ್ನು ದಾಟಿಸುವ ನಾವಿಕ ಭಗವಂತ. ನದಿಯ ದಾಟಿಸುವ ಅಂಬಿಗಾ ನಾವಿಕ ಇಬ್ಬರ ಧ್ಯೇಯವು ಒಂದೇ ಆಗಿದೆ. ಭಜನಾ ಮಂದಿರದ ನಿರ್ಮಾಣ ಸಂಸ್ಕೃತಿಗೆ ಅಡಿಕಲ್ಲು ಹಾಕಿದಂತೆ. ತ್ಯಾಗ , ಸೇವೆಯ ಮನೋಭಾವನೆ ಇದ್ದಾಗ ಮಾತ್ರ ಜನ್ಮ ಸಾರ್ಥಕ ವಾಗಲು‌ ಸಾಧ್ಯ –

ಒಡಿಯೂರು ಶ್ರೀ