













ಎಡಮಂಗಲ ಗ್ರಾಮದ ಮರ್ಧೂರಡ್ಕ ಸ.ಕಿ.ಪ್ರಾ. ಶಾಲೆಗೆ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್, ಮುಂಬಯಿ ಇವರು ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಉದಯಕುಮಾರ್ ರೈ ನಾಗನಕಜೆ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಕೇನ್ಯ ಶ್ರೀ ದುರ್ಗಾ ಸೇವಾ ಸಂಘದ ಸದಸ್ಯರಾದ ದೇವಿಪ್ರಸಾದ್ ರೈ ಕೇನ್ಯ ಈ ಕೊಡುಗೆ ಒದಗಿಸುವಲ್ಲಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಭವ್ಯ ಬಿ, ಗೌರವ ಶಿಕ್ಷಕಿ ಗಾಯತ್ರಿ, ಅಕ್ಷರದಾಸೋಹ ಸಿಬ್ಬಂದಿ ಪ್ರೇಮ ಉಪಸಿತರಿದ್ದರು. ಶಿಕ್ಷಕಿ ಶ್ರೀಮತಿ ಭವ್ಯ ಬಿ ಸ್ವಾಗತಿಸಿ, ವಂದಿಸಿದರು.







