ಅಮರಪಡ್ನೂರು:ಜಯರಾಮ ಆಚಾರ್ಯ ಪದವು ನಿಧನ

0

ಅಮರಪಡ್ನೂರು ಗ್ರಾಮದ ಪದವು ನಿವಾಸಿ ಜಯರಾಮ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಜೂ.13 ರಂದು ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಕಳೆದ ಒಂದು ವಾರದ ಹಿಂದೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಮತ್ತೆ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರರುವುದಾಗಿ ತಿಳಿದು ಬಂದಿದೆ.


ಮೃತರು ಪತ್ನಿ ಶ್ರೀಮತಿ ಕಮಲ, ಓರ್ವ ಪುತ್ರ ಕುಕ್ಕುಜಡ್ಕದಲ್ಲಿರುವ ಶಮಿತಾಅಲ್ಯುಮಿನಿಯಮ್ ವರ್ಕ್ಸ್‌ ಇದರ ಮಾಲಕ ಸತೀಶ್ ಆಚಾರ್ಯ ಪದವು, ಮೂವರು ಪುತ್ರಿಯರಾದ ಶ್ರೀಮತಿ ಸವಿತಾ, ಶ್ರೀಮತಿ ವಿದ್ಯಾಶ್ರೀ, ಶ್ರೀಮತಿ ಜಯಶ್ರೀ, ಸೊಸೆ ಶ್ರೀಮತಿ ಸುಶ್ಮಿತಾ, ಓರ್ವ ಸಹೋದರರಾದ ವಾಸ್ತು ಶಿಲ್ಪಿ ಅಪ್ಪಯ್ಯ ಆಚಾರ್ಯ‌ ಮತ್ತು ಇಬ್ಬರು ಸಹೋದರಿಯರನ್ನು, ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.


ಮೃತರು ಕಳೆದ ಕೆಲ ವರ್ಷಗಳಿಂದ ಪದವು ಎಂಬಲ್ಲಿ ಕಬ್ಬಿಣದ ಕೆಲಸ ಮಾಡಿಕೊಂಡು ಬರುತ್ತಿದ್ದು ಜನಾನುರಾಗಿಯಾಗಿದ್ದರು. ಮೃತರ‌ ಅಂತ್ಯ ಸಂಸ್ಕಾರವನ್ನು ಪದವು ಮನೆಯಲ್ಲಿ ನೆರವೇರಿಸಲಾಯಿತು.