ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕರಿಗೆ ಸೂಚನೆ

0

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ಮೂರು ತಿಂಗಳವರೆಗೆ ಸಾರ್ವಜನಿಕರಿಗೆ ಕೆಲ ಸೂಚನೆಗಳನ್ನು ನೀಡಲಾಗಿದೆ‌.

ಜೂ.16 ರಿಂದ ಅನ್ವಯಿಸುವಂತೆ ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಗಾಲದ ಅವಧಿಯಲ್ಲಿ ಪ್ರಾಕೃತಿಕ ವಿಕೋಪದ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮ ಪಂಚಾಯತ್ ರಸ್ತೆಗಳಲ್ಲಿ ಮರ, ಕೆಂಪುಕಲ್ಲು, ಜಲ್ಲಿ, ಮರಳು ಮುಂತಾದ ಅತಿ ಭಾರವಾದ ವಸ್ತುಗಳ ಸಾಗಾಟ ಮಾಡುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿದೆ.ಅಲ್ಲದೇ ನಾಗರಿಕರು ತಮ್ಮ ಸ್ವಂತ ಸ್ಥಳಗಳಲ್ಲಿ ಮಣ್ಣು ತೆಗೆದು ಸಮತಟ್ಟು ಮಾಡಿ ನೀರಿನ ಜೊತೆಯಲ್ಲಿ ಮಣ್ಣನ್ನು ರಸ್ತೆಗೆ ಬಿಡುವುದಾಗಲಿ, ಸಾರ್ವಜನಿಕ ರಸ್ತೆ ಸಂಚಾರಕ್ಕೆ ತೊಡಕುಂಟಾಗುವ ಯಾವುದೇ ಕೆಲಸವನ್ನು ಮಾಡುವಂತಿಲ್ಲ.

ನೀರು ಸರಾಗವಾಗಿ ಹರಿಯುವಂತೆ ಚರಂಡಿಗೆ ಹೋಗಲು ವ್ಯವಸ್ಥೆಯನ್ನು ಸ್ಥಳದ ಮಾಲಿಕರೇ ಮಾಡತಕ್ಕದ್ದು. ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುವಂತೆ ಯಾವುದೇ ಸಂದರ್ಭದಲ್ಲಿ ರಸ್ತೆ ಬದಿ ಅಗೆತ, ನೀರಿನ ಪೈಪು ಅಳವಡಿಕೆ, ಇತರ ಕಾಮಗಾರಿಗಳನ್ನು ಮಾಡದಂತೆ ಕೋರಲಾಗಿದೆ. ಅತೀ ಜರೂರುವೆಂದು ಕಂಡುಬಂದಲ್ಲಿ ಇಂತಹ ಯಾವುದೇ ಕಾಮಗಾರಿಗಳನ್ನು ನಡೆಸಲು ಗ್ರಾಮ ಪಂಚಾಯತಿಯ ಅನುಮತಿಯನ್ನು ಪಡಕೊಳ್ಳತಕ್ಕದ್ದು. ಇದಕ್ಕೆ ವಿರುದ್ದವಾಗಿ ಕೆಲಸ ಕಾರ್ಯಗಳನ್ನು ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಗ್ರಾ.ಪಂ ಆಡಳಿತಾಧಿಕಾರಿ ದೇವರಾಜ್ ಮುತ್ಲಾಜೆ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಅವರಿಗೆ ಮಾಹಿತಿಯನ್ನು ನೀಡುವಂತೆ ವಿನಂತಿಸಲಾಗಿದೆ.