ಅಂತರ್ ಜಿಲ್ಲಾ ಮಟ್ಟದ ಪತ್ರಲೇಖನ ಸ್ಪರ್ಧೆ: “ಅಮ್ಮನಿಗೊಂದು ಮಗಳ ಪತ್ರ”

0

ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲ ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಕೊಡಗು ಜಿಲ್ಲೆಗಳ ಮಹಿಳೆಯರು, ವಿದ್ಯಾರ್ಥಿನಿಗಳಿಗೆ ಅಂತರ್ ಜಿಲ್ಲಾ ಮಟ್ಟದ ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

“ಅಮ್ಮನಿಗೊಂದು ಮಗಳ ಪತ್ರ” ಎಂಬ ವಿಷಯದಡಿ ನಡೆಯುವ ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗಾಗಿ ಹಾಗೂ ಮಹಿಳೆಯರಿಗಾಗಿ ಸಾರ್ವಜನಿಕ ವಿಭಾಗವನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

ಸ್ಪರ್ಧೆಗೆ ಸಲ್ಲಿಸುವ ಪತ್ರವು 100 ಪದಗಳ ಒಳಗೆ ಇರಬೇಕು. ಪತ್ರವು ಸ್ವರಚಿತವಾಗಿದ್ದು ಕನ್ನಡ ಭಾಷೆಯಲ್ಲಿ ಬರೆಯಬೇಕು. ಮಗಳು ತನ್ನ ತಾಯಿಗೆ ಉದ್ದೇಶಿಸಿ ಪತ್ರ ಬರೆಯಬೇಕಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಯು ಒಂದು ಪತ್ರವನ್ನು ಮಾತ್ರ ಸಲ್ಲಿಸಬಹುದು.
ಸ್ಪರ್ಧಿಗಳು ತಮ್ಮ ಹೆಸರು, ವಯಸ್ಸು, ಊರು, ಜಿಲ್ಲೆ, ಮೊಬೈಲ್ ಸಂಖ್ಯೆ ಹಾಗೂ ವಿಭಾಗದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು. ಪತ್ರವನ್ನು ಕೈಬರಹದಲ್ಲಿ ಬರೆದು ಅದರ ಭಾವಚಿತ್ರವನ್ನು ಕಳುಹಿಸಬಹುದಾಗಿದ್ದು, ಅಥವಾ ಯೂನಿಕೋಡ್ ಕನ್ನಡ ತಂತ್ರಾಂಶ ಬಳಸಿ ಟೈಪ್ ಮಾಡಿ ಕಳುಹಿಸಬಹುದಾಗಿದೆ. ಪತ್ರಗಳನ್ನು ವಾಟ್ಸಾಪ್ ಮೂಲಕವೇ ಸಲ್ಲಿಸಬೇಕು.
ಪತ್ರ ಸಲ್ಲಿಸಲು ಜುಲೈ 5 ಕೊನೆಯ ದಿನಾಂಕವಾಗಿದ್ದು, 9740189529 ಸಂಖ್ಯೆಗೆ ಕಳುಹಿಸಬಹುದು. ಸ್ಪರ್ಧೆಯ ಅತ್ಯುತ್ತಮ ಎರಡು ಬರಹಗಳಿಗೆ ಬಹುಮಾನವನ್ನು ದೊರೆಯಲಿದೆ.