













ರಾಜ್ಯ ಪ್ರಶಸ್ತಿ ಪುರಸ್ಕೃತ ಮಿತ್ರ ಬಳಗ ರಿ.ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21ರಂದು ಕಾಯರ್ತೋಡಿಯಲ್ಲಿ ನಡೆಯಿತು.

ಸ್ಥಳೀಯರಾದ ಸಚಿನ್ ದೈಂಗೊಡಿ ರವರು ಯೋಗ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಮಿತ್ರ ಬಳಗದ ಅಧ್ಯಕ್ಷರಾದ ಯಶೋಧರ, ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.
ಸಂಘದ ಮುಖ್ಯಸ್ಥರಾದ ದೇವಿ ಪ್ರಸಾದ್ ಸ್ವಾಗತಿಸಿ ಹಾಗೂ ದೀಪಕ್ ಕಾಯರ್ತೋಡಿ ಧನ್ಯವಾದಗಳು ಸಲ್ಲಿಸಿದರು.







