













ರಾಜ್ಯ ಒಕ್ಕಲಿಗರ ಸಂಘ, ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಮತ್ತು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಮತ್ತು ವಾಣಿ ವಿದ್ಯಾಸಂಸ್ಥೆಗಳು ಹಳೆಕೋಟೆ, ಬೆಳ್ತಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 517 ನೇ ನಾಡಪ್ರಭು ಕೆಂಪೇಗೌಡ ಸಂಸ್ಕರಣ ಜಿಲ್ಲಾ ಮಟ್ಟದ ದಿನಾಚರಣೆಯನ್ನು ಜೂ. 27 ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ಕೆ.ವಿ.ರೇಣುಕಾಪ್ರಸಾದ್ ಉದ್ಘಾಟನೆ ಮಾಡಲಿದ್ದು, ಉಪನ್ಯಾಸಕರಾದ ಶ್ರೀ ಮೋಹನ್ ಗೌಡರವರು ಸಂಸ್ಕರಣ ಉಪನ್ಯಾಸ ನೀಡಲಿದ್ದಾರೆ. ಕೆಂಪೇಗೌಡ ಜಿಲ್ಲಾ ಪ್ರಶಸ್ತಿಯನ್ನು ಬೆಳ್ತಂಗಡಿಯ ಸಾಮಾಜಿಕ, ಶೈಕ್ಷಣಿಕ, ಸಹಕಾರಿ ಶ್ರೀಯುತ ಪದ್ಮಗೌಡ ಬೆಳಾಲುರವರಿಗೆ ನೀಡಲಿದ್ದು, ಜಿಲ್ಲಾ ಸಂಘದ ಪದಾಧಿಕಾರಿ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸುವಂತೆ ದ.ಕ.ಜಿಲ್ಲಾ ಪ್ರಧಾನಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ತಿಳಿಸಿದ್ದಾರೆ.






