ದುಗ್ಗಲಡ್ಕ: ಕಾಣೆಯಾಗಿದ್ದ ಯುವಕನನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ ಸುಳ್ಯ ಪೊಲೀಸರು

0

ಕೊಯಿಕುಳಿ ನಿವಾಸಿ ಡಿ. ಸಿ. ಕೌಶಿಕ್ ತಮಿಳುನಾಡಿನ ವೇಲೂರಿನಿಂದ ಪತ್ತೆ

ಕಳೆದ ಒಂದು ವಾರಗಳ ಹಿಂದೆ ಕಾಣೆಯಾಗಿದ್ದ ದುಗ್ಗಲಡ್ಕದ ಕೊಯಿಕುಳಿ ನಿವಾಸಿ ಡಿ ಸಿ ಕೌಶಿಕ್ ಎಂಬಾತನನ್ನು ಸುಳ್ಯ ಪೊಲೀಸರು ತಮಿಳುನಾಡಿನ ವೇಲೂರಿನಿಂದ ಪತ್ತೆ ಹಚ್ಚಿ ಕರೆ ತಂದು ಜೂನ್ 24ರಂದು ಪೋಷಕರ ಕೈಗೆ ಒಪ್ಪಿಸಿರುತ್ತಾರೆ.

ಈತ ದೊಡ್ಡೇರಿಯಲ್ಲಿರುವ ಚಂದ್ರಶೇಖರ್ ಎಂಬುವವರ ಪುತ್ರರಾಗಿದ್ದು ಜೂ 18 ರಿಂದ ಕಾಣೆಯಾಗಿದ್ದರು.

ಈ ಬಗ್ಗೆ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ತಮಿಳುನಾಡಿನಿಂದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ್ ಬಿಪಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಶೈಲ ಎಂ ಕೆ ಮತ್ತು ಗಜೇಂದ್ರ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.