ಎರಡೂ ವಾಹನದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ: ಕೆವಿಜಿ ಆಸ್ಪತ್ರೆಗೆ ದಾಖಲು















ಅರಂತೋಡು ನಯಾರಾ ಪೆಟ್ರೋಲ್ ಬಂಕ್ ಮುಂಭಾಗ ಕಾರು ಮತ್ತು ಜೀಪ್ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂರು ಪ್ರಯಾಣಿಕರಿಗೆ ಮತ್ತು ಜೀಪಿನಲ್ಲಿದ್ದ ಓರ್ವ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾದ ಘಟನೆ ಜೂನ್ ೨೯ರಂದು ನಡೆದಿದೆ.

ಗಾಯಾಳುಗಳನ್ನು ಅರಂತೋಡಿನ ಸಮೃದ್ಧಿ ಆಂಬುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ತಂದು ದಾಖಲಿಸಿದ್ದು,ಗಾಯಗೊಂಡ ಕಾರಿನ ಪ್ರಯಾಣಿಕರು ಸುಳ್ಯದ ನಾವೂರು ಮೂಲದವರು ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.











