ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಉದ್ಯಮಿ ಅಶೋಕ ಪ್ರಭು ಮತ್ತು ಯೋಜನಾಧಿಕಾರಿ ಮಾಧವರಿಗೆ ಸನ್ಮಾನ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ಜೂ.28 ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉದ್ಯಮಿಗಳು ದಾನಿಗಳಾದ ಅಶೋಕ ಪ್ರಭು ಸುಳ್ಯ ಮತ್ತು ಸಂಘದ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಯೋಜನಾಧಿಕಾರಿ ಮಾಧವ ರವರನ್ನು ಸನ್ಮಾನಿಸಲಾಯಿತು.


ಕಾರ್ಯದರ್ಶಿ ಮದುಚಂದ್ರ ಸ್ವಾಗತಿಸಿದರು. ದಿನೇಶ್ ಬಾಚೋಡಿ ಲೆಕ್ಕ ಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ವಾಸುದೇವ ಪೆರುಂಬಾರು ವಂದಿಸಿದರು. ಉಪಾಧ್ಯಕ್ಷ ಧನಂಜಯ ಪಟ್ರುಕೋಡಿ, ಸದಾಶಿವ ರೈ, ನಾಗೇಶ್ ಕೇರ್ಪಳ, ಮನೋಹರ ಬೊಳ್ಳೂರು, ಗೋಪಾಲ್ ನಡುಬೈಲ್, ವಸಂತಪರಿವಾರಕಾನ, ಕಮಲಾಕ್ಷ ಕಲ್ಲುಗುಂಡಿ, ಭವಾನಿಶಂಕರ ಕಾವೇರಿ, ಮಲ್ಲೇಶ ಗಾಂಧಿನಗರ, ಸುರೇಶ ಗುತ್ತಿಗಾರು, ರಘುರಾಮ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.