ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2026-2027 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ















ಮೂಲಕ ರಚಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ರೋಟರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊ.ಡಾ.ರಾಮ್ ಮೋಹನ್ ರವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು .

ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಚುನಾವಣಾಧಿಕಾರಿ ಶ್ರೀಮತಿ ಜಯಶ್ರೀ. ಕೆ ಚುನಾವಣಾ ಸಾಕ್ಷರತ ಸಂಘದ ಮಹತ್ವವನ್ನು ತಿಳಿಸಿದರು. ರಾಜ್ಯಪಾಲ ಅಹನ್ ಕಿರಣ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಶಾಲಾ ನಾಯಕಿ – ರಿಧಾ ಫಾತಿಮ, ಉಪನಾಯಕ – ಸಮೃದ್ಧ್ ಕೆ.ಆರ್, ಸಭಾಪತಿ – ಚರಿಷ್ಮಾ ರೈ, ಶಿಕ್ಷಣ ಮಂತ್ರಿ – ವಂದಿತಾ ವಿ.ಎಸ್, ಆಹಾರ ಮಂತ್ರಿ – ಅನ್ನಿಕಾ , ಸಾಹಿತ್ಯ

ಮತ್ತು ಸಂಸ್ಕೃತಿ ಮಂತ್ರಿ – ಅನುಷ್ಕಾ ಕೆ.ಆರ್, ಕ್ರೀಡಾ ಮಂತ್ರಿ – ಅಬ್ದುಲ್ ಸಮದ್, ಗೃಹ ಮಂತ್ರಿ – ಹಾಶಿರ್.ಜಿ, ನೀರಾವರಿ ಮಂತ್ರಿ – ಪ್ರಧಾನ್.ಎಲ್.ಕೆ, ಆರೋಗ್ಯ ಮತ್ತು

ಸ್ವಚ್ಛತೆ ಮಂತ್ರಿ – ಪೂರ್ವಿಕ.ಆರ್.ಕೆ, ಸಾರಿಗೆ ಮಂತ್ರಿ – ಅವನಿ.ಬಿ.ಎನ್, ವಿರೋಧ ಪಕ್ಷದ ನಾಯಕಿ – ಶಿವಾಲಿ ಡಿ.ಎ, ಉಪನಾಯಕ – ಚೈತನ್ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕು.ನಿರೀಕ್ಷಾ, ಗಾನವಿ, ವಂಶಿ.ಬಿ.ಆರ್ ಪ್ರಾರ್ಥಿಸಿದರು. ಚುನಾವಣಾಧಿಕಾರಿಗಳಾದ ಶಿಕ್ಷಕಿ ರಮ್ಯಾ ಅಡ್ಕಾರು ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಸಂಜೀವಿ ಪಿ.ಆರ್ ವಂದಿಸಿದರು








