













ಸುಳ್ಯ ಕಸಬಾದ ಬೆಟ್ಟಂಪಾಡಿ ಗುಂಡಿಯಡ್ಕ ನಿವಾಸಿ ಅರುಣ್ ರಾವ್ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಜೂ.30 ರಂದು ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಅವರು ಮನೆಯಲ್ಲಿರುವ ವೇಳೆಯಲ್ಲಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ತೀವ್ರವಾಗಿ ಉಸಿರಾಟದ ಸಮಸ್ಯೆ ಕಂಡು ಬಂದಿದ್ದು ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆಸ್ಪಂದಿಸದಿದ್ದುದರಿಂದ ರಾತ್ರಿ ಸಮಯದಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಮೃತರುಅವಿವಾಹಿತರಾಗಿದ್ದು ತಾಯಿ ಶ್ರೀಮತಿ ಜಲಜಾಕ್ಷಿ, ಸಹೋದರಿ ಭಾರತಿ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.







