ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ನಷ್ಟ ಪರಿಹಾರ ನಿಧಿ ಜೀವವಿಮಮೊತ್ತದ ಚೆಕ್ ವಿತರಣೆ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಬಳ್ಪ ಗ್ರಾಮದ ಶ್ರೀ ಹರಿ ಸಂಘದ ಸದಸ್ಯರಾದ ಸತೀಶ್ ಅವರು ಹೃದಯ ಘಾತದಿಂದ ಮೃತಪಟಿದ್ದು, ಅವರ ಜೀವಾ ವಿಮಾ ಹಾಗೂ ನಷ್ಟ ಪರಿಹಾರ ನಿಧಿ ಮೊತ್ತದ ಚೆಕ್ ನ್ನು ಕಡಬ ಶಾಖೆಯಲ್ಲಿ ಅವರ ಪತ್ನಿ ಜಯಂತಿವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಕಡಬ ಶಾಖೆಯ ವ್ಯವಸ್ಥಕರಾದ ನಾಗರಾಜ್ ಕಡಬ ತಾಲೂಕಿನ ಮೇಲ್ವಿಚಾರಕಿರಾದ ಕಾವ್ಯಲಕ್ಷ್ಮಿ, ಬಳ್ಪ ಗ್ರಾಮದ ಸೇವಾಧಿಕ್ಷಿತರಾದ ಶೋಭಾ, ಬಳ್ಪ ಗ್ರಾಮದ ಘಟ ಸಮಿತಿ ಅಧ್ಯಕ್ಷರಾದ ತುಕಾರಾಮ ಕೋಡಿ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಪಲ್ಲತಡ್ಕ, ಕಾರ್ಯದರ್ಶಿ ಮನೋಹರ್ ನಿರಜರಿ, ಜೊತೆ ಕಾರ್ಯದರ್ಶಿ ವಿಂಧ್ಯಾ ಉಪಸ್ಥಿತರಿದ್ದರು.