ನೇಮಿರಾಜ್ ಪಲ್ಲೋಡಿಯವರಿಗೆ ಸನ್ಮಾನ














ಬಿ .ಎಂ .ಎಸ್, ಆಟೋ ರಿಕ್ಷಾ ಚಾಲಕರ ಸಂಘ, ಪಂಜ ಘಟಕದ 2025-2026ಸಾಲಿನ ಮಹಾಸಭೆ ಮತ್ತು ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮ ಜೂ. 30 ರಂದು ಪಂಜ ಎಂ.ಎಸ್ ಘಟಕದ ಅಧ್ಯಕ್ಷ ಬಾಲಕೃಷ್ಣ ಸಂಪ್ಯಾಡಿ ರವರ ಅಧ್ಯಕ್ಷತೆಯಲ್ಲಿ ಶಾರದಾಂಬಾ ಭಜನಾ ಮಂದಿರದಲ್ಲಿ ನಡೆಯಿತು.
ಸುಳ್ಯ ಬಿ ಎಂ ಎಸ್ ನ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ದೀಪ ಬೆಳಿಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುಳ್ಯ ಬಿ ಎಂ ಎಸ್ ನ ಅಧ್ಯಕ್ಷ ಪ್ರಕಾಶ್ ಎಂ ಎಸ್, ಕಾರ್ಯದರ್ಶಿ ನಾರಾಯಣ ಎಸ್ ಎಂ, ಕೋಶಾಧಿಕಾರಿ ರವಿ, ಪಂಜ ಬಿ.ಎಂ.ಎಸ್ ಘಟಕದ ಕಾರ್ಯದರ್ಶಿ ತಾರನಾಥ ಕಾರ್ಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾಲಕೃಷ್ಣ ಸಂಪ್ಯಾಡಿ ಮತ್ತು ತಾರನಾಥ ಕಾರ್ಜ ಇವರು ನೂತನ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಪದಾಧಿಕಾರಿಗಳು:
ನೂತನ ಅಧ್ಯಕ್ಷರಾಗಿ ನಾಗೇಶ್ ಕುಳ್ಳಾಜೆ,ಕಾರ್ಯದರ್ಶಿಯಾಗಿ ನಳಿನಿ ಮಂಚಿಕಟ್ಟೆ, ಕೋಶಾಧಿಕಾರಿಯಾಗಿ ದಿನೇಶ್ ಕುಳ್ಳಾಜೆ, ಉಪಾಧ್ಯಕ್ಷರಾಗಿ ಚಂದ್ರಶೇಖರ ದೇರಾಜೆ,ಜೊತೆ ಕಾರ್ಯದರ್ಶಿಯಾಗಿ ಪುನೀತ್ ಕಕ್ಯಾನ ಆಯ್ಕೆಯಾದರು. ದಾಮೋದರ ನೇರಳ ನಿರೂಪಿಸಿದರು. ಮಾನವೀಯತೆ ಮೆರೆದ ಆಟೋ ಚಾಲಕರಾದ ಗಿರೀಶ್ ರೈ ಮತ್ತು ಚಂದ್ರಶೇಖರ ದೇರಾಜೆ ಗೌರವಿಸಲಾಯಿತು. ಕಾಮಧೇನು ಕೋಲ್ಡ್ ಹೌಸ್ ಮಾಲಕರಾದ ನಾಗೇಶ್ ನಾವೂರು ಮತ್ತು ನಿವೃತ್ತ ಆಟೋ ಚಾಲಕ ಗಣೇಶ್ ಪೈ ಯವರನ್ನು ಗುರುತಿಸಲಾಯಿತು ಹನುಮಾನ್ ಹಾಲಿಡೇಸ್ ಪಂಜ ಇದರ ಮಾಲಕರಾದ ಕಿರಣ್ ನೆಕ್ಕಿಲಮತ್ತು ಗೌತಮ್ ಬೊಳ್ಳಾಜೆ ಬೆಳಗಿನ ಉಪಹಾರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಶಿದಾಸ್ ನಾಗತೀರ್ಥ ಸ್ವಾಗತಿಸಿದರು. ತಾರಾನಾಥ್ ಕಾರ್ಜ ವರದಿ ವಾಚಿಸಿದರು. ನಳಿನಿ ಮಂಚಿಕಟ್ಟೆ ವಂದಿಸಿದರು.







