













ಪಂಜದಿಂದ ಪುತ್ಯ-ಸಂಪ ಸಂಪರ್ಕಿಸುವ ರಸ್ತೆಗೆ ಇತ್ತೀಚೆಗೆ ಕಾಂಕ್ರೀಟ್ ಮಾಡಲಾಗಿದ್ದು, ಲಾರಿಯೊಂದು ಈ ಕಾಂಕ್ರೀಟ್ ರಸ್ತೆಯಲ್ಲೇ ಸಾಗಿ ರಸ್ತೆ ಹಾಳಾದ ಘಟನೆ ನಡೆದಿದೆ.
ಪಂಜದಿಂದ ಪುತ್ಯ – ಸಂಪರ್ಕಿಸುವ ರಸ್ತೆಗೆ ಸುಮಾರು 25 ದಿನಗಳ ಹಿಂದೆ ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ಮಾಡಲಾಗಿತ್ತು. ರಸ್ತೆಯ ಉದ್ಘಾಟನೆಯಾಗುವ ಮೊದಲೇ ಈ ರಸ್ತೆಯಲ್ಲಿ ರಬ್ಬರ್ ಮರ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದ ಹಾದುಹೋಗಿ ರಸ್ತೆಯ ಬದಿಯ ಕಾಂಕ್ರೀಟ್ ಹಾಗೂ ಮೋರಿಗೆ ಹಾನಿಯಾಗಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.









