ಸುಳ್ಯ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಮಹಾಸಭೆ

0

ನೂತನ ಪದಾಧಿಕಾರಿಗಳು : ಗೌರವಾಧ್ಯಕ್ಷ – ಶಿವ ಸುಳ್ಯ, ಅಧ್ಯಕ್ಷ – ಕೇಶವಚಂದ್ರ ಭಟ್ ಬೆಳ್ಳಾರೆ, ಪ್ರಧಾನಕಾರ್ಯದರ್ಶಿ-ಸಿದ್ದೀಕ್ ಗೂನಡ್ಕ, ಖಜಾಂಜಿ- ತಾಜುದ್ದೀನ್ ಟರ್ಲಿ

ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಾವೂರಿನ ವೈಲೆನ್ಸಿಯ ಕಟ್ಟಡದಲ್ಲಿ ಸಂಘದ ಗೌರವಾಧ್ಯಕ್ಷ ಶಿವ ಸುಳ್ಯ ರವರ ಅಧ್ಯಕ್ಷತೆಯಲ್ಲಿ ಜು.11 ರಂದು ನಡೆಯಿತು.

ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ರಾಗಿ ಶಿವ ಸುಳ್ಯ, ನೂತನ ಅಧ್ಯಕ್ಷರಾಗಿ ಕೇಶವಚಂದ್ರ ಭಟ್ ಬೆಳ್ಳಾರೆ,ಪ್ರಧಾನಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಕೋಶಾಧಿಕಾರಿಯಾಗಿ ತಾಜುದ್ದೀನ್ ಟರ್ಲಿ, ಉಪಾಧ್ಯಕ್ಷರಾಗಿ ರಫೀಕ್ ಬಿ.ಎಮ್.ಎ,ಜತೆ ಕಾರ್ಯದರ್ಶಿಯಾಗಿ ರಫೀಕ್ ಲೈಫ್ ಕೇರ್, ಕಾನೂನು ಸಲಹೆಗಾರರಾಗಿ ಅನೂಪ್ ಪಿ .ಆರ್ ಬೆಳ್ಳಾರೆ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್ ಸುಳ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಪುನೀತ್ ಸಂಕೇಶ, ರೆಸ್ಕ್ಯೂ ಕಾರ್ಯದರ್ಶಿಯಾಗಿ ಹನೀಫ್ ಜಯನಗರ, ಸಂಘಟನಾ ಜತೆ ಕಾರ್ಯದರ್ಶಿಯಾಗಿ ಸಮೀರ್ ಕಾಣಿಯೂರು, ಮೀಡಿಯಾ ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಜಯನಗರ ಇವರನ್ನುಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಿದ್ದೀಕ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿದರು.