ಅಡ್ಕಾರು: ಧನ್ವಿ ಲೇಡೀಸ್ ಟೈಲರ್ ಸ್ಥಳಾಂತರಗೊಂಡು ಶುಭಾರಂಭ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಎ.ಎ.ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಗಣೇಶ್ ಅಂಬಾಡಿಮೂಲೆಯವರ ಮಾಲಕತ್ವದ ಧನ್ವಿ ಲೇಡೀಸ್ ಟೈಲರಿಂಗ್ ಜು.8 ರಂದು ಅಡ್ಕಾರು-ಗುಂಡ್ಯಡ್ಕ ರಸ್ತೆಯ ಪಕ್ಕದಲ್ಲಿರುವ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಭಟ್, ಅಬ್ಬಾಸ್ ಮೊಯ್ಲಾರ್ ಗುಂಡ್ಯಡ್ಕ, ಇಸ್ಮಾಯಿಲ್ ಅಡ್ಕಾರು, ಎಸ್.ಎ.ರೆಹ್ಮಾನ್ ಗುಂಡ್ಯಡ್ಕ, ಕನಕಮಜಲು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ಬೊಮ್ಮೆಟ್ಟಿ, ಮಾಜಿ ನಿರ್ದೇಶಕಿ ಭಾರತಿ ಪಿ.ಕೆ. ಕಜೆಗದ್ದೆ, ಗ್ರಾಹಕರು ಮತ್ತು ಸ್ಥಳೀಯರು ಆಗಮಿಸಿ ಶುಭ ಹಾರೈಸಿದರು.