ಮಳೆಯೂ ಇಲ್ಲ, ಜನರೂ ವಿರಳ, ಸ್ನಾನಘಟ್ಟದಲ್ಲಿ ತೀರ್ಥ ಸ್ನಾನವೂ ಇಲ್ಲ














ಕುಕ್ಕೆಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಈ ಮಳೆಗಾಲ ನೀರಿನಿಂದ ತುಂಬಿರ ಬೇಕಾದಲ್ಲಿ ನೀರಿಲ್ಲದೆ ಬೀಸಿಗೆಯಂತಾಗಿದೆ. ಸಾದಾರಣವಾಗಿ ಈ ಸಮಯದಲ್ಲಿ ಕುಮಾರಧಾರ ಸ್ನಾನ ಘಟ್ಟ ತುಂಬಿರಬೇಕಿತ್ತು. ಆದರೆ ಈ ಮಳೆಗಾಲ ಕಳೆದವಾರದಲ್ಲಿ ಒಂದು ದಿನವಷ್ಟೆ ಸ್ನಾನ ಘಟ್ಟ ನೀರಿನಿಂದ ಮುಳುಗಿತ್ತು. ಆದರೆ ಅಂದಿನಿಂದ ಭಕ್ತರಿಗೆ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ಅವಕಾಶವಿಲ್ಲ, ಬದಲಾಗಿ ಸ್ನಾನ ಘಟ್ಟದಿಂದ ಸ್ವಲ್ಪ ಮೇಲ್ಬಾಗ ರಸ್ತೆಯಲ್ಲಿ ಡ್ರಮ್ ಇಟ್ಟು ಅಲ್ಲಿ ಸ್ನಾನ ಮಾಡಲು, ಅಲ್ಲದೆ ಕಳೆದ ವರ್ಷ ಆರಂಭವಾದ ನಲ್ಲಿ ನೀರಿನ (ಶವರ್) ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಕೆ ಬರುವ ಭಕ್ತರ ಸಂಖ್ಯೆ ಅಲ್ಪ ವಿರಳವಾಗಿದೆ.







