ಸುಳ್ಯ: ಎ.ಎಚ್.ಆರ್. ಗ್ರೂಪ್ ನೇತೃತ್ವದ ದಿ ರಿದನ್ ಮಂದಿ ಫ್ಯಾಮಿಲಿ ರೆಸ್ಟೋರೆಂಟ್ ಜು.13 ರಂದು ಸುಳ್ಯದಲ್ಲಿ ಉದ್ಘಾಟನೆಗೊಂಡಿತು.
ಸುಳ್ಯ ಪರಿವಾರಕಾನ ಮದರ್ ತೆರೆಸಾ ಚರ್ಚ್ ಧರ್ಮಗುರು ರೆ. ಫಾ. ಜೋಶೈ ನಿರಪ್ಪಾಲ್ ಸುಳ್ಯ ಪರಿಸರದಲ್ಲಿ ಅತ್ಯಂತ ಚೆಂದವಾಗಿ ನಿರ್ಮಿಸಿದ ರಿಧಾನ್ ಮಂದಿ ಹೋಟೆಲ್ ಇದರಲ್ಲಿ ಗ್ರಾಹಕರಿಗೆ ಸಂತೃಪ್ತಿ ದೊರಕಲಿ ಎಂದು ಹಾರೈಸಿದರು















ರೆಡ್ ಕ್ರಾಸಿನ ಸುಧಾಕರ್ ರೈ ಮಾತನಾಡಿ, ಅನೇಕ ರೆಸ್ಟೋರೆಂಟ್’ಗಳಿದ್ದರೂ, ಮಂದಿ ಬಿರಿಯಾನಿಯ ಕಾನ್ಸೆಪ್ಟ್ ಹೊಸದು. ಉತ್ತಮ ಕಾನ್ಸೆಪ್ಟಲ್ಲಿ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಡಿಸೈನ್ ಕೂಡ ಚೆನ್ನಾಗಿದೆ. ಸುಳ್ಯಕ್ಕೆ ಹೊಸದು ಬರುವಾಗ ನಾವು ಸ್ವಾಗತಿಸಬೇಕು. ಇವರು ಸುಳ್ಯಕ್ಕೆ ಹೊಸತನ ನೀಡುತ್ತಾರೆ. ಅಡಿಕೆಗೆ ದರ ಹೆಚ್ಚಾದರೆ ನಾವೆಲ್ಲಾ ಬಿರಿಯಾನಿ ತಿನ್ನುವವರೇ. ಬಂದವರೆಲ್ಲಾ ಸಂಸ್ಥೆಯ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಿ ಎಂದು ಹಾರೈಸಿದರು.
ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ಉತ್ತಮ ರೆಸ್ಟೋರೆಂಟಿನಲ್ಲಿ ಊಟ ಮಾಡಬೇಕು ಎನ್ನುವುದು ಎಲ್ಲರ ಕನಸು. ರೆಸ್ಟೋರೆಂಟ್ ನೋಡಿದಾಕ್ಷಣ ವಾಹನ ನಿಲ್ಲಿಸುವವರು ಹೆಚ್ಚಿದ್ದಾರೆ. ಮೆಲ್ಕಾರಿಂದ ಪುತ್ತೂರಿನ ಸಂಪ್ಯದಲ್ಲಿ ಈಗ ಸುಳ್ಯದಲ್ಲಿ ರಿದನ್ ಮಂದಿ ಬಂದಿದೆ. ಇನ್ನಷ್ಟು ಶಾಖೆಗಳು ಹೆಚ್ಚಾಗಲಿ ಎಂದು ಹಾರೈಸಿದರು.

ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಮಾತನಾಡಿ, ಸುಳ್ಯದ ಇತಿಹಾಸದಲ್ಲಿ ಹೋಟೆಲಿಗೆ ದೊಡ್ಡ ಇತಿಹಾಸವಿದೆ. ಅನೇಕ ರೀತಿಯ ಹೋಟೆಲ್ ಗಳಿತ್ತು. ರಾತ್ರಿ ಹೊತ್ತು ಬಂದ್ರೆ ಜಗಮಗಿಸುತ್ತಿರುತ್ತದೆ. ದೇಶದಲ್ಲೇ ಆಹಾರಕ್ಕೆ ದೊಡ್ಡ ವ್ಯವಸ್ಥೆ ಇದೆ. ಈ ದೇಶದಲ್ಲಿ ಶೇ. 70ರಷ್ಟು ಮಾಂಸಾಹಾರಿಗಳಿದ್ದಾರೆ. ನಿಧಾನವಾಗಿ ಬೇಯಿಸುವುದು, ನೀರಿನಲ್ಲಿ ಬೇಯಿಸುವುದು ಮೊದಲಾದವು ಮಂದಿ ಆಹಾರದ ವಿಶೇಷ. ಈ ರೆಸ್ಟೋರೆಂಟ್ ಶುಚಿ ರುಚಿಯಾಗಿರಲಿ. ಉತ್ತಮವಾಗಿ ಮೂಡಿಬರಲಿ ಎಂದು ಹಾರೈಸಿದರು.
ಸುಳ್ಯ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಮಾತನಾಡಿ, ಅತ್ಯಂತ ಆಕರ್ಷಕವಾಗಿದೆ ದಿ ರಿದನ್ ಮಂದಿ. ಮಡಿಕೇರಿ ಭಾಗದಿಂದ ಬರುವ ಯಾತ್ರಾರ್ಥಿಗಳು ಶುಚಿ – ರುಚಿಯಾದ ಹಾಗೂ ಪಾರ್ಕಿಂಗ್ ಇರುವ ಹೋಟೆಲ್ ಗಳ ಪೈಕಿ ರಿದನ್ ಮಂದಿ. ಈ ಭಾಗದಲ್ಲಿರುವ ಇರುವ ಇನ್ನೆರಡು ಹೋಟೆಲ್ ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಅದೇ ರೀತಿ ರಿದನ್ ಮಂದಿ. ಅರೇಬಿಕ್ ಡಿಶ್ ಸುಳ್ಯದಲ್ಲಿ ಹೊಸದು. ಒಳ್ಳೆ ಒಳ್ಳೆಯ ಸಂಸ್ಥೆಗಳು ಸುಳ್ಯಕ್ಕೆ ಬರುತ್ತಿದೆ. ಇದರ ಅರ್ಥ ಸುಳ್ಯ ಬೆಳೀತಾ ಇದೆ. ಇಂತಹ ಒಳ್ಳೆಯ ರೆಸ್ಟೋರೆಂಟ್ ಗಳು ಹೆಸರುವಾಸಿಯಾಗಬೇಕು. ಎಲ್ಲಾ ವರ್ಗದವರು ಇಲ್ಲಿಗೆ ಬರಬೇಕು. ಪ್ರೀತಿ – ವಿಶ್ವಾಸದ ಹೋಟೆಲ್ ಇದಾಗಲಿ ಎಂದು ಹಾರೈಸಿದರು.

ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕೆಲಸ ನಡೆಯುತ್ತಿದೆ. ಸುಳ್ಯದಲ್ಲಿ ಇಂತಹದ್ದೊಂದು ಸಂಸ್ಥೆ ಬಂದಿರುವುದು ಖುಷಿ ತಂದಿದೆ. ಈ ಉದ್ದಿಮೆ ಯಶಸ್ವಿಯಾಗಲಿ. ಈ ಗಾಂಧಿನಗರಕ್ಕೆ ಆಹಾರ ನಗರಿ ಎಂದು ಹೆಸರಿಸಬಹುದು. ಯಾಕೆಂದರೆ ಇಲ್ಲಿರುವಷ್ಟು ರೆಸ್ಟೋರೆಂಟ್ ಬೇರೆಲ್ಲಿಯೂ ಇಲ್ಲ ಎಂದರು.
ಸುಳ್ಯ ರೋಟರಿ ಕ್ಲಬ್ ಬುಲೆಟಿನ್ ಎಡಿಟರ್ ಅಬ್ದುಲ್ ಕಲಾಂ ಮಾತನಾಡಿ ಸುಳ್ಯದ ಜನತೆ ವಿನೂತನ ಕೊಡುಗೆಯನ್ನು ನೀಡಿದ್ದಾರೆ ಕುಟುಂಬ ಸಮೇತವಾಗಿ ಆಹಾರ ಸೇವೆನೆಗೆ ಇದೊಂದು ಉತ್ತಮ ಅವಕಾಶವನ್ನು ರಿಧಾನ್ ಮಂದಿ ಕಲ್ಪಿಸಿದೆ ಉದ್ಯಮವು ಯಶಸ್ವಿಯಾಗಲಿ ಎಂದರು.
ಕೃಷ್ಣ ಪ್ರಶಾಂತ್ ಮಾತನಾಡಿ ಯಾತ್ರಾರ್ಥಿಗಳಿಗೆ ಉತ್ತಮ. ಸುಳ್ಯದ ಈ ಭಾಗ ಬಹಳಷ್ಟು ಬೆಳೆದಿದೆ. ರಿದನ್ ಮಂದಿ ಇನ್ನಷ್ಡು ಮೆರುಗನ್ನು ಸುಳ್ಯಕ್ಕೆ ನೀಡಿದೆ. ಈ ಉದ್ದಿಮೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.

ಪುತ್ತೂರು ಉದ್ಯಮಿ ಇಸ್ಮಾಯಿಲ್ ಮಾತನಾಡಿ ಸಾಂಪ್ರದಾಯಿಕ ಆಹಾರ ನೀಡುತ್ತಾ ಜನಮೆಚ್ಚುಗೆ ಗಳಿಸಿದ ಸಂಸ್ಥೆ ಸುಳ್ಯದಲ್ಲಿ ಯಶಸ್ವಿಯಾಗಲಿ ವೆಲ್ಡಿಂಗಿನಲ್ಲಿ ಸಹಕರಿಸಿದ ಜಯರಾಮ್, ಟೈಲ್ಸ್ ಕೆಲಸದಲ್ಲಿ ಸಹಕರಿಸಿದ ಯೂನಸ್ ಜಟ್ಟಿಪಳ್ಳ, ಇಂಟೀರಿಯರ್ ನಲ್ಲಿ ಸಹಕರಿಸಿದ ಮಹಮ್ಮದ್ ರವೀಸ್, ಇಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗಿನಲ್ಲಿ ಇಕ್ಬಾಲ್, ಸಿವಿಲ್ ಇಂಜೀನಿಯರ್ ಮಹಮ್ಮದ್ ಅನಾಸ್, ಇಂಟೀರಿಯರ್ ಹಾಗೂ ಡಿಸೈನ್ ನಲ್ಲಿ ಸಹಕರಿಸಿದ ರಾಹುಲ್ ಕುಮಾರ್, ಬ್ರಾಂಡಿಂಗ್ ಹಾಗೂ ಪ್ರಮೋಷನಿನಲ್ಲಿ ಆರ್ವಿ ಇಂಟರ್ ಗ್ರಾಫಿಕ್ಸಿನ ಜ್ಞಾನೇಶ್ ವಿಶ್ವಕರ್ಮ ಹಾಗೂ ಸಂಸ್ಥೆಗೆ ಸಹಕರಿಸಿದ ಇಸ್ಮಾಯಿಲ್ ಸಂಪ್ಯ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶೆರೀಫ್ ಜಟ್ಟಿಪಳ್ಳ, ಹರ್ಷಿತ್ ಮರ್ಕಂಜ ಅವರನ್ನು ಗೌರವಿಸಲಾಯಿತು.
ಸಭಾದ್ಯಕ್ಷತೆ ವಹಿಸಿದ ಸುಳ್ಯ ತಾಲೂಕು ಸುಡಾ ಅಧ್ಯಕ್ಷ ಕೆ.ಎಂ. ಮುಸ್ತಫಾ ಮಾತನಾಡಿ, ಸುಳ್ಯದ ಜನತೆಗೆ ಆದರ್ಶಪ್ರಾಯವಾದ, ಅಪೇಕ್ಷಿತವಾದ ಹೋಟೆಲ್ ದಿ ರಿದನ್ ಮಂದಿ. ಉದ್ಯಮ ಕೇವಲ ಉದ್ಯಮವಲ್ಲ. ಅದು ಸಮಾಜಕ್ಕಾಗಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ. ಇಂತಹ ಉತ್ತಮ ಉದ್ಯಮಗಳು ನಮ್ಮೂರಿಗೆ ಬರಬೇಕಾದರೆ ಎದುರಾಗುವ ಅಡೆತಡೆಗಳನ್ನು ಪರಿಹರಿಸಿಕೊಡುವ ಕೆಲಸವೂ ಆಗಬೇಕು ಎಂದ ಅವರು, ಜನರು ರುಚಿಕರ, ಸ್ವಾದಿಷ್ಟವಾದ ಆಹಾರವನ್ನು ಹುಡುಕುತ್ತಾರೆ. ರಿದನ್ ಮಂದಿಯ ಜೊತೆಗೆ ಕುನಾಫಾ ಎಂಬ ಶುದ್ಧ ಸಸ್ಯಾಹಾರಿ ಆಹಾರ ಇದು. ಸಸ್ಯಾಹಾರಿಗಳು ಇದರ ಸವಿಯನ್ನು ಇಲ್ಲಿ ಸವಿಯಬಹುದು. ಡಾ. ವೀರೇಂದ್ರ ಹೆಗ್ಗಡೆ ಹೇಳಿದಂತೆ, ಮೂಲ ಔಷಧಿ ಎಂದರೆ ಆಹಾರ. ಅದನ್ನು ಹೈಜಿನಿಕ್ ಆಗಿ ಸೇವಿಸಬೇಕು ಅನ್ತಾರೆ. ರಾತ್ರಿ ಹೊತ್ತು ಉದ್ಯಮಕ್ಕೆ ನಿರ್ಬಂಧ ಇದೆ. ಆದರೆ ಫುಡ್ ಡೆಲಿವರಿ ವ್ಯವಸ್ಥೆಗೆ ಅನುವು ಮಾಡಿ ಕೊಡುವಂತೆ ಮನವಿ ಮಾಡಿದರು.

ಕೆವಿಜಿ ಇಂಜಿನಿಯರಿಂಗ್ ಕಾಲೇಜ್ ನಿವೃತ್ತ ಪ್ರಾಂಶುಪಾಲರಾದ ಜ್ಞಾನೇಶ್,ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಗೌಡ ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ, ಸುಳ್ಯ ಪ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಮೀದ್ ಜನತಾ ,ಸುಳ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಹರಿರಾಯ ಕಾಮತ್,
ಉದ್ಯಮಿ ಎನ್.ಆರ್. ರಂಜಿತ್ ಸುಳ್ಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ ಎಪಿಎಂಸಿ ಮಾಜಿ ನಿರ್ದೇಶಕ ಅದಾಂ ಹಾಜಿ ಕಮ್ಮಾಡಿ,ಕಟ್ಟಡದ ಮಾಲಕ ಹಾಜಿ ಇಬ್ರಾಹಿಂ ಕುಂಬ್ಳೆ, ಅನ್ವರ್ ಡೈಮಂಡ್, ಸರ್ಫುದ್ದೀನ್,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್,ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಗಾಂಧಿನಗರ ಮಸೀದಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಉದ್ಯಮಿಗಳಾದ ಹಾಜಿ ಅಬ್ದುಲ್ ಲತೀಫ್ ಹರ್ಲಡ್ಕ, ಹಾಜಿ ಸಲೀಂ ಪೆರಂಗೊಡಿ, ಮಿಹರಾಜ್ ಸುಳ್ಯ,ಕೆ ಬಿ ಇಬ್ರಾಹಿಂ,ಬಶೀರ್ ಸಪ್ನಾ ಮೊದಲಾದವರು ಉಪಸ್ಥಿತರಿದ್ದರು.
ಶೆರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಹರ್ಷಿತ್ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.







