














ಅಡ್ಕಾರಿನ ನಡುವಡ್ಕ ಬಳಿ ಕಾರು ಮತ್ತು ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಆಟೋ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯವಾದ ಘಟನೆ ಜು. 17ರಂದು ಸಂಜೆ ನಡೆದಿದೆ.



ಪುತ್ತೂರು ಕಡೆಯಿಂದ ಬಂದ ಆಟೋ ರಿಕ್ಷಾ ನಡುವಡ್ಕದಲ್ಲಿ ಟರ್ನ್ ತೆಗೆದುಕೊಳ್ಳುವಾಗ ಎದುರಿನಿಂದ ಬಂದ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿಯಾಯಿತು.
ಎರಡು ವಾಹನಗಳು ಪರಸ್ಪರ ಡಿಕ್ಕಿ ಆದಾಗ ಆಟೋ ರಿಕ್ಷಾದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಕಾರಿನಲ್ಲಿ ಇಬ್ಬರಿದ್ದು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.









