ನೆಲ್ಲೂರು ಕೆಮ್ರಾಜೆ ಗ್ರಾಮ ಸಭೆ

0

ಕುಡಿಯುವ ನೀರಿನ ಸಮಸ್ಯೆ, ಬೀದಿ ನಾಯಿ ಹಾವಳಿ, ಅರಣ್ಯ ಇಲಾಖೆಯ ನೋಟೀಸ್ ಬಗ್ಗೆ ಚರ್ಚೆ

ನೆಲ್ಲೂರು ಕೆಮ್ರಾಜೆ ಗ್ರಾ.ಪಂ ನ ಪ್ರಥಮ ಹಂತದ ಗ್ರಾಮ ಸಭೆ ಗ್ರಾ.ಪಂ ನ ಸಭಾಭವನದಲ್ಲಿ ನಡೆಯಿತು. ಸಭೆಯ ನೋಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ಉಪಸ್ಥಿತರಿದ್ದರು.


ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸೀತಾರಾಮ ಭಟ್ ಅಡಿಕೆಹಿತ್ಲು ವಹಿಸಿದ್ದರು. ವೇದಿಕೆಯಲ್ಲಿ ಪಿಡಿಒ ಶ್ರೀಮತಿ ಸರೋಜಿನಿ ಬಿ, ಕಾರ್ಯದರ್ಶಿ ಜಯಶೀಲ ರೈ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ
ಶ್ರೀಮತಿ ಸರೋಜಿನಿ ಸ್ವಾಗತಿಸಿ , ಕಾರ್ಯದರ್ಶಿ ಜಯಶೀಲ ರೈ ವರದಿ ವಾಚಿಸಿದರು. ಪಂಚಾಯತ್ ಸಿಬ್ಬಂದಿ ಪ್ರಭಾಕರ್ ವಂದಿಸಿದರು.

ಪಂಚಾಯತ್ ನ ಆಡಳಿತಾಧಿಕಾರಿ ಗ್ರಾಮ ಸಭೆಗೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರಾದ ಹಿರಿಯ ಮುಖಂಡರನ್ನು ಸಭೆಯ ಅಧ್ಯಕ್ಷ ಸ್ಥಾನ ವಹಿಸಲಾಯಿತು.
ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ನಾಯಿ ಹಾವಳಿ, ಅರಣ್ಯ ಇಲಾಖೆಯವರಿಂದ ಖಾಸಗಿ ಭೂಮಿಯವರಿಗೆ ನೋಟೀಸ್ ನೀಡಿರುವ ಬಗ್ಗೆ ಚರ್ಚೆ ನಡೆಯಿತು.