ಸಮಾಧಾನಿಸಿದ ಟ್ಯಾಕ್ಸಿ ಚಾಲಕರು














ಮದ್ಯದ ಅಮಲಿನಲ್ಲಿ ನಾಲ್ವರು ಸ್ನೇಹಿತರು ಹೊಡೆದಾಟ ಮಾಡಿಕೊಂಡು ರಸ್ತೆಯಲ್ಲಿ ಎಳೆದಾಡಿಕೊಂಡ ಘಟನೆ ಜು ೧೭ ರಂದು ಸಂಜೆ ಸುಳ್ಯ ಬಾಳೆಮಕ್ಕಿ ಟ್ಯಾಕ್ಸಿ ಕಾರು ನಿಲ್ದಾಣದ ಬಳಿ ನಡೆದಿದೆ.
ನಾಲ್ವರು ಕೂಡ ಕೂಲಿ ಕಾರ್ಮಿಕರಾಗಿದ್ದು ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸಂದರ್ಭ ಮದ್ಯ ಸೇವಿಸಿ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ.
ರಸ್ತೆಯಲ್ಲಿ ಹೊಡೆದಾಟ ಆರಂಭಿಸಿಕೊಂಡ ಇವರು ಪರಸ್ಪರ ಒಬ್ಬರನ್ನೊಬ್ಬರು ರಸ್ತೆಯಲ್ಲಿ ಎಳೆದಾಡಿಕೊಂಡಿದ್ದಾರೆ. ಇದನ್ನು ನೋಡಿದ ಸ್ಥಳೀಯ ಟ್ಯಾಕ್ಸಿ ಚಾಲಕರು ಅವರಿಗೆ ಎರಡು ಪೆಟ್ಟುಕೊಟ್ಟು ಬುದ್ದಿಮಾತು ಹೇಳಿ ಸಮಾಧಾನಪಡಿಸಿ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.







